ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಖಿಲ ಕರ್ನಾಟಕ ಒಕ್ಕಲಿಗರ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶಾಂತಾ ಸುರೇಂದ್ರ ಹಾಗೂ ಸಂತೋಷ ಗೌಡ ಅವರು ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಸರಳ ಸಮಾರಂಭದಲ್ಲಿ ಶಾಂತ ಸುರೇಂದ್ರ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷ ಸೇರಿದರು. ಜೊತೆಗೆ ರೈತನಾಯಕ ಸಂತೋಷ್‍ಗೌಡ ಅವರು ಕೂಡ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕ ಎಸ್.ಎನ್. ಚೆನ್ನಬಸಪ್ಪವರ ಸಮ್ಮುಖದಲ್ಲಿ ಪಕ್ಷದ ಶಾಲು ಹೊದಿಸಿ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ರಾಮಣ್ಣ, ಮಹಿಳೆಯರಿಗೆ ಬಿಜೆಪಿ ಪಕ್ಷವು ಘನತೆಯನ್ನು ನೀಡುತ್ತ ಬಂದಿದೆ. ಮೋದಿಯವರು ಮಹಿಳೆಯರಿಗೆ ಅತ್ಯಂತ ಗೌರವ ನೀಡುತ್ತಾರೆ. ಇದಕ್ಕೆ ಬಹುದೊಡ್ಡ ಉದಾಹರಣೆ ಎಂದರೆ ಸ್ವಚ್ಛ ಭಾರತ್ ಯೋಜನೆಯಾಗಿದೆ ಈ ಯೋಜನೆಯಡಿಯಲ್ಲಿ ಕೋಟ್ಯಾಂತರ ಶೌಚಾಲಯಗಳು ನಿರ್ಮಾಣವಾಗಿವೆ. ಬಯಲು ಸಿಮೆಗಳಲ್ಲಿ ಬಯಲು ಶೌಚಾಲಯವೇ ಗತಿಯಾಗಿತ್ತು. ಇದು ಅತ್ಯಂತ ಅವಮಾನಕರವಾದ ಪರಿಸ್ಥಿತಿಯಾಗಿತ್ತು. ಶೌಚಾಲಯಗಳು ಬಂದ ನಂತರ ಬಯಲು ಸೀಮೆಯ ಮಹಿಳೆಯರು ಗೌರವದಿಂದ ಬದುಕುತ್ತಿದ್ದಾರೆ. ಇದು ನರೇಂದ್ರ ಮೋದಿಯವರ PM Narendra Modi ಕೊಡುಗೆ ಎಂದರು.
Also read: ಇನ್ಮುಂದೆ ಮೆಡಿಸನ್ ಕಂಪೆನಿಗಳು ವೈದ್ಯರಿಗೆ ಗಿಫ್ಟ್, ಟೂರ್ ನೀಡುವಂತಿಲ್ಲ
ಹಾಗೆಯೇ ಕಸ ವಿಲೇವಾರಿ ಕೂಡ ಕಷ್ಟವಾಗಿತ್ತು. ಈಗ ಪ್ರತಿ ಗ್ರಾ.ಪಂ.ಗಳಲ್ಲೂ ಕಸದ ವಾಹನ ಬರುತ್ತಿದೆ. ಮೋದಿಯವರು ಕೇವಲ ಭಾಷಣ ಮಾಡಲಿಲ್ಲ. ಕೆಲಸ ಮಾಡಿದರು. ತ್ರಿಬಲ್ ತಲಾಕ್ ರದ್ದಾಗಿರುವುದನ್ನು ಮುಸ್ಲಿಂ ಮಹಿಳೆಯರೇ ಸ್ವಾಗತಿಸುತ್ತಾರೆ ಇದೊಂದು ಅನಾಗರೀಕ ಪದ್ಧತಿಯಾಗಿತ್ತು. ಇದನ್ನು ತೆಗೆದುಹಾಕುವ ಮೂಲಕ ಮೋದಿಯವರು ಮಹಿಳೆಯರಿಗೆ ಗೌರವ ತಂದುಕೊಟ್ಟಿದ್ದಾರೆ. ಹಾಗೆಯೇ ಪೌರತ್ವ ತಿದ್ದುಪಡಿ ಕೂಡ ಮೋದಿಯವರ ಕೊಡುಗೆಯಾಗಿದೆ ಎಂದ ಅವರು ಮಹಿಳೆಯರಿಗೆ ಗೌರವ ಕೊಟ್ಟ ಪಕ್ಷಾವಾದ್ದರಿಂದ ಬಿಜೆಪಿಗೆ ಹೆಚ್ಚು ಹೆಚ್ಚು ಮಹಿಳೆಯರು ಬರುತ್ತಿದ್ದಾರೆ. ಅದರ ಜೊತೆಗೆ ರೈತರು, ಕಾರ್ಮಿಕರು, ಅಷ್ಟೇಕೆ ಅಲ್ಪಸಂಖ್ಯಾತರು ಕೂಡ ಬಿಜೆಪಿ ಸೇರುತ್ತಿದ್ದಾರೆ ಎಂದರು.
ಬಿಜೆಪಿ ಪಕ್ಷ ಸೇರಿದ ಶಾಂತ ಸುರೇಂದ್ರ ಮಾತನಾಡಿ, ಮೋದಿ ದೇವತಾ ಮನುಷ್ಯ ಪ್ರಪಂಚವೇ ಅವರನ್ನು ಮೆಚ್ಚಿದೆ. ಜೊತೆಗೆ ಸಂಸದ ರಾಘವೇಂದ್ರ ಕೂಡ ಒಳ್ಳೆಯವರು ದೇಶ ಪ್ರೇಮಿಗಳು ಹಾಗಾಗಿ ಬಿಜೆಪಿ ಸೇರಿದೆ. ಮುಖ್ಯವಾಗಿ ಕೈಗೆ ಸಿಗುವ ನಾಯಕ ನಮಗೆ ಬೇಕಾಗಿತ್ತು. ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ್ದೇನೆ. ಈ ಬಾರಿ ರಾಘವೇಂದ್ರ ಅವರನ್ನು ಗೆಲ್ಲಿಸುತ್ತೇವೆ ಎಂದರು.
ಶಾಸಕ ಎಸ್.ಎನ್. ಚೆನ್ನಬಸಪ್ಪ ಮಾತನಾಡಿ, ಮೋದಿಯ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮತ್ತೇ ಅಧಿಕಾರಕ್ಕೆ ಬರುತ್ತಿದ್ದಾರೆ. ಜಗತ್ತು ಭಾರತ ಕಡೆ ನೋಡುವ ಹಾಗೆ ಮಾಡಿದ್ದಾರೆ. ರಾಮನ ರಾಮಮಂದಿರ, ವಿಶ್ವನಾಥನ ಕಾರಿಡಾರ್, ಉಜ್ಜೈನಿ ಅಭಿವೃದ್ಧಿ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಗಾಯಿತ್ರಿ ದೇವಿ ಮಲ್ಲಪ್ಪ, ಪ್ರಮುಖರಾದ ಮೋಹನ್‍ರೆಡ್ಡಿ, ಮಾಲತೇಶ್ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post