ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ K S Eshwarappa ಅವರನ್ನು ಭೇಟಿ ಮಾಡಲು ಮತ್ತು ಅವರಿಗೆ ಬೆಂಬಲ ನೀಡಲು ಶಿವಮೊಗ್ಗಕ್ಕೆ ಬಂದಿರುವುದಾಗಿ ಮಾಜಿ ಸಚಿವ ಹಾಗೂ ಭೋವಿ ಸಮಾಜದ ಮುಖಂಡ ಗೂಳಿ ಹಟ್ಟಿ ಶೇಖರ್ Gulihatti Shekar ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರು ಕಟ್ಟಾ ಹಿಂದು ಧರ್ಮದ ಅಭಿಮಾನಿಗಳಾಗಿದ್ದಾರೆ. ದೇವರ ಬಗ್ಗೆ ಅವರಿಗೆ ಅಪಾರ ಪ್ರೀತಿ ಇದೆ. ಅವರು ನಮ್ಮ ಹಿತವನ್ನು ಯಾವಾಗಲೂ ಬಯಸಿದ್ದಾರೆ. ನಮಗೆ ಬೆಂಬಲ ನೀಡಿದ್ದಾರೆ. ನಮ್ಮಗೆ ಪ್ರೇರಣೆಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಬೆಂಬಲ ನೀಡುವುದು ನನ್ನ ಆಧ್ಯ ಕರ್ತವ್ಯವಾಗಿದೆ ಎಂದರು.

Also read: ಬಸ್ಟಾಂಡ್ ರಾಘುನಿಂದ ಏನು ಅಭಿವೃದ್ಧಿ ಆಗಿದೆ? ನಮಗೆ ಅಧಿಕಾರ ಕೊಡಿ: ಬೇಳೂರು ವಾಗ್ದಾಳಿ
ಈಶ್ವರಪ್ಪನವರ ಹಾಗೆ ಬಿಜೆಪಿಯಲ್ಲಿ ಹಲವರಿಗೆ ಅನ್ಯಾಯವಾಗಿದೆ. ಸಿ.ಟಿ.ರವಿ, ಸದಾನಂದಗೌಡ, ಪ್ರತಾಪ ಸಿಂಹ, ಇವರೆಲ್ಲರನ್ನು ಕೈಬಿಟ್ಟಿರುವುದರಿಂದ ಬಿಜೆಪಿಗೆ ಹಿನ್ನಡೆಯಾಗಲಿದೆ. ಬಿಜೆಪಿಯಿಂದ ಭೋವಿ ಸಮಾಜಕ್ಕೆ ಖಂಡಿತ ಅನ್ಯಾಯವಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 1.5ಲಕ್ಷ ಭೋವಿ ಸಮಾಜವಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ 50 ಸಾವಿರಕ್ಕು ಹೆಚ್ಚು ಹಾಗೂ ಶಿಕಾರಿಪುರ ಒಂದರಲ್ಲಿಯೇ 55 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಷ್ಟೊಂದು ಜನಸಂಖ್ಯೆ ಇಟ್ಟುಕೊಂಡು ನಮ್ಮ ಸಮಾಜದವರು ಯಾರು ವಿಧಾನಸಭೆಗೆ ಆಗಲಿ, ಲೋಕಸಭೆಗಾಗಲಿ ಸ್ಪರ್ಧಿಸಿಲ್ಲ. ಯಾವ ಪಕ್ಷಗಳು ಆಧ್ಯತೆ ನೀಡಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಾದರೂ 2 ಕ್ಷೇತ್ರಗಳಲ್ಲಿ ಟಿಕೇಟ್ ನೀಡಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post