ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂಡಿಯಾ ಒಕ್ಕೂಟ ಮಾಡಿದರು. ಈಗ ಕಾಂಗ್ರೆಸ್ ಜೊತೆಗೆ ಹೋಗಲ್ಲ ಅಂತ ಮಮತಾ ಬ್ಯಾನರ್ಜಿ, Mamatha Banerjee ಕೇಜ್ರಿವಾಲ್, Kejriwal ನಿತೀಶ್ ಕುಮಾರ್ Nitish Kumar ಹೇಳಿದ್ದಾರೆ. ಇಂಡಿಯಾ I.N.D.I.A ಒಕ್ಕೂಟ ಛಿದ್ರ ಛಿದ್ರ ಆಗುತ್ತೆ. ಮೋದಿ ಮತ್ತೆ ಪ್ರಧಾನಮಂತ್ರಿ ಆಗುತ್ತಾರೆ. ರಾಮ ಭಕ್ತರು, ರಾಷ್ಟ್ರ ಭಕ್ತರನ್ನು ಜನ ಇಷ್ಟ ಪಡುತ್ತಾರೆ. ಆಡಳಿತಕ್ಕೆ ತರುತ್ತಾರೆ ಎಂದು ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೀರಪ್ಪ ಮೊಯ್ಲಿ ಬಾಯಲ್ಲಿ ಇಷ್ಟು ದಿವಸ ಬಿರುಡೆ ಇಟ್ಟುಕೊಂಡಿದ್ದರು. ಈಗ ನರೇಂದ್ರ ಮೋದಿ PM Narendra Modi ರಾಮ ಲಲಾನ ಗಭರ್ಗುಡಿಗೆ ಹೋಗಿದ್ದೇ ತಪ್ಪು ಅಂದಿದ್ದಾರೆ. ಎಐಸಿಸಿ ಅಧಕ್ಷ ಮಲ್ಲಿಕಾರ್ಜುನ ಖರ್ಗೆ Mallikarjuna Kharge ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಮೊಯ್ಲಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಲೋಕಸಭೆ ಟಿಕೇಟ್‍ಗಾಗಿ ರಾಹುಲ್, ಸೋನಿಯಾ Rahul, Sonia ತೃಪ್ತಿ ಪಡಿಸಲು ಮೊಯ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ Ayodya Rama Mandira ಪ್ರಾಣಪ್ರತಿಷ್ಠೆಗೆ ಹೋಗುವ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರು 20 ದಿನ ತೆಗೆದುಕೊಂಡರು. ಈಗ ಗೋಡ್ಸೆ ರಾಮ, ಗಾಂಧಿ ರಾಮ ಅಂತ ಒಡೆಯುತ್ತಿದ್ದಾರೆ. ಜೈ ಟಿಪ್ಪು ಅಂತಿದ್ದವರು ಈಗ ಜೈಶ್ರೀರಾಮ್ ಅಂತಿದ್ದಾರೆ. ಟಿಪ್ಪು ಅಂತಿದ್ದವರು ಈಗ ರಾಮನ ಜಪ ಮಾಡುತ್ತಿದ್ದಾರೆ. ನಮ್ಮ ಹೆಸರಲ್ಲಿ ಶಿವ, ರಾಮ ಇದೆ ಎನ್ನುತ್ತಿದ್ದರು. ಸಮುದ್ರದ ಅಲೆ ವಿರುದ್ಧ ಈಜಲು ಹೋದರೆ ಕೊಚ್ಚಿಕೊಂಡು ಹೋಗ್ತೀವಿ ಅಂತ ಕಾಂಗ್ರೆಸಿಗರು ರಾಮನಿಗೆ ಗೌರವ ಕೊಡಲು ಬಂದಿದ್ದಾರೆ. ಕನಿಷ್ಠ ವಿರೋಧ ಪಕ್ಷದ ಸ್ಥಾನ ಆದರೂ ಸಿಗಲಿ ಅಂತ ವಾಪಸ್ ಬಂದಿದ್ದಾರೆ ಎಂದು ಕುಟುಕಿದರು.
Also read: ಅರಳಿಸುವ ಸಾಹಿತ್ಯಕ್ಕೆ ಮನಸ್ಸಿನಲ್ಲಿ ಆಯಸ್ಸು ಅಧಿಕ: ಎಂ.ಎನ್. ಸುಂದರರಾಜ್
ಸಿದ್ದರಾಮಯ್ಯ ತಲೆಯಲ್ಲಿ ಮೆದುಳು ಇದೆಯೋ ಇಲ್ವೋ ಗೊತ್ತಿಲ್ಲ. ರಾಮ ಲಲಾ ಪಕ್ಕದಲ್ಲಿ ಸೀತೆ, ಹನುಮಂತ ಇಲ್ಲ ಅಂದಿದ್ದಾರೆ. ಅಯೋಧ್ಯೆಯಲ್ಲಿ ಮಸೀದಿ ಒಡೆದಾಗ ಇದ್ದಿದ್ದು ಬಾಲ ರಾಮ. ಹಳ್ಳಿ ಜನ ಕೂಡ ರಾಮ ಹುಟ್ಟಿದ್ದು ಅಯೋಧ್ಯೆ ಅಂತಾರೆ. ಬಾಲ ರಾಮನ ಪಕ್ಕ ಸೀತೆ ಇರಲ್ಲ ಅಂತನೂ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ಹಿಂದುಳಿದ ಜಾತಿ ನಾಯಕ ಎಂದು ಘೋಷಣೆ ಮಾಡಿಕೊಂಡು ಸಮಾಜದಲ್ಲಿ ಸಂಘರ್ಷ ಹುಟ್ಟು ಹಾಕಿದ್ದೇ ಸಾಧನೆ. ಸಿದ್ದರಾಮಯ್ಯ ತಾನು ಹಿಂದುಳಿದ, ದಲಿತ ನಾಯಕ ಅಂತ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ಜಾತಿ ಗಣತಿ ವರದಿ ಸಿದ್ಧ ಇದ್ದರೂ ಬಿಡುಗಡೆ ಮಾಡಿಲ್ಲ. ಹಿಂದುಳಿದ ವರ್ಗಗಳ ಅಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಮುಖ್ಯಮಂತ್ರಿಗಳು ಯಾವಾಗ ಕೇಳಿದರೂ ವರದಿ ಕೊಡುತ್ತೇನೆ ಎಂದಿದ್ದಾರೆ. ಮೊದಲು ವರದಿ ಸ್ವೀಕಾರ ಮಾಡಲಿ ಎಂದರು.
ಜಾತಿ ಗಣತಿ ಹಿನ್ನೆಲೆಯಲ್ಲಿ ಲಿಂಗಾಯತರು ಸಮ್ಮೇಳನವನ್ನೇ ಮಾಡಿದರು. ಒಕ್ಕಲಿಗರು ಸಹಿ ಸಂಗ್ರಹ ಮಾಡಿದ್ದಾರೆ. ಹೀಗೆ ಸಿದ್ದರಾಮಯ್ಯ ಇಡೀ ಹಿಂದೂ ಸಮಾಜದಲ್ಲಿ ಸಂಘರ್ಷ ಹುಟ್ಟು ಹಾಕಿದ್ದಾರೆ. ಈಗ ತಮ್ಮ ಹಿಂಬಾಲಕರ ಮೂಲಕ ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶ ಮಾಡಲು ಹೊರಟಿದ್ದಾರೆ. ಇದು ವೋಟಿಗಾಗಿ ಈ ಹಿನ್ನಲೆಯಲ್ಲಿ ನಿಮ್ಮ ನಿಲುವೇನು? ಸರ್ಕಾರದ ನಿಲುವೇನು? ಎಂದು ಪ್ರಶ್ನಿಸಿದರು.
ಜಾತಿ ಗಣತಿ ಸಿದ್ಧವಾಗಿ ಒಂಭತ್ತು ವರ್ಷ ಆಗಿದೆ. ಜಾತಿಗಣತಿ ವೈಜ್ಞಾನಿಕವಾಗಿ ಆಗಬೇಕು ಎಂಬುದು ಹಲವರ ಬೇಡಿಕೆ. ಜಯಪ್ರಕಾಶ್ ಹೆಗಡೆ ವರದಿ ರೆಡಿ ಇದೆ ಅಂದಾಗ ಸಿದ್ದರಾಮಯ್ಯ ತಗೊಬೇಕಿತ್ತು. ಚರ್ಚೆಗೆ ಬಿಡಬೇಕಿತ್ತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗಿರೀಶ್ ಪಟೇಲ್, ಟಿ.ಡಿ.ಮೇಘರಾಜ್, ರಮೇಶ್, ಚಂದ್ರಶೇಖರ್, ಶಿವರಾಜ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post