ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಧಾನಿ ನರೇಂದ್ರ ಮೋದಿಯವರ PM Narendra Modi ಶಿವಮೊಗ್ಗ ಭೇಟಿ ‘ರಾಜಕೀಯ ಜಾತ್ರೆ’ಯೇ ಹೊರತು ಜನರ ಬಗ್ಗೆ ಕಾಳಜಿಯಿಂದಲ್ಲ. ಇದೊಂದು ಪ್ರತಿಷ್ಠತೆಯ ಪ್ರದರ್ಶನವಾಯಿತೇ ಹೊರತು ಮಲೆನಾಡಿನ ಸಮಸ್ಯೆಗಳಿಗೆ ಉತ್ತರವಾಗಲಿಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ Ayanur Manjunath ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿಯವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದೇ ಚುನಾವಣಾ ಪ್ರಚಾರ ಎಂದುಕೊಂಡಿದ್ದಾರೆ. ಅವರು ಬಂದರೂ, ಹೋದರೂ ಅಷ್ಟೇ ಇಲ್ಲಿನ ಯಾವುದೇ ಸಮಸ್ಯೆಗಳಿಗೆ ಉತ್ತರವಾಗಲಿಲ್ಲ. ಕೇಂದ್ರಕ್ಕೆ ಸಂಬಂಧಪಟ್ಟಂತೆ ವಿಐಎಸ್‍ಎಲ್ ಕಾರ್ಖಾನೆಯ ಸಮಸ್ಯೆ ಇತ್ತು, ಶರಾವತಿ ಸಂತ್ರಸ್ಥರ ಸಮಸ್ಯೆ ಇತ್ತು, ಬರಗಾಲವಿತ್ತು, ಅಡಿಕೆ ಬೆಳೆಗಾರರ ಸಮಸ್ಯೆ ಇತ್ತು. ಇದ್ಯಾವುದರ ಬಗ್ಗೆಯೂ ಅವರು ಮಾತನಾಡಲಿಲ್ಲ. ನೀತಿ ಸಂಹಿತೆ ಇದ್ದರೂ ಕೂಡ ಅದಕ್ಕೆ ಪೂರಕವಾಗಿಯೇ ಮಾತನಾಡಬಹುದಿತ್ತು. ಆದರೆ ಹಾಗೆ ಮಾಡದೇ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರೂ ಅಷ್ಟೇ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವೈ.ಹೆಚ್.ನಾಗರಾಜ್, ಪ್ರಮುಖರಾದ ಶಿ.ಜು.ಪಾಶ, ಜಿ.ಪದ್ಮನಾಭ್, ಧೀರರಾಜ್ ಹೊನ್ನಾವಿಲೆ, ಆಯನೂರು ಸಂತೋಷ್ ಇದ್ದರು.

ಆಯನೂರು ಮಂಜುನಾಥ್ ಅವರ ಪತ್ರಿಕಾಗೋಷ್ಠಿ ನಡೆಯುವ ಮೊದಲೇ ಚುನಾವಣಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪತ್ರಿಕಾಗೋಷ್ಠಿಗೆ ಅನುಮತಿ ಬೇಕು ಎಂದರು.
ಆದರೆ ಇದಕ್ಕೆ ಉತ್ತರ ನೀಡಿ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿಗೆ ಅನುಮತಿ ಬೇಕು ಎಂದು ಎಲ್ಲಿದೆ. ಆ ಆರ್ಡರ್ ಇದ್ದರೆ ಕೊಡಿ ನಾನು ಕಾರ್ಯಕರ್ತರ ಸಭೆಯನ್ನ ನಡೆಸುತ್ತಿಲ್ಲ. ಇಲ್ಲಿಗೆ ಬರುವ ಮೊದಲು ಅಧಿಕಾರಿಗಳು ಗೈಡ್‍ಲೈನ್ಸ್ ತೆಗೆದುಕೊಳ್ಳಬೇಕು ಎಂದರು.

ಈ ಮಧ್ಯೆ ಚುನಾವಣಾಧಿಕಾರಿಗಳಿಗೆ ನೀವು ವೀಡಿಯೋ ರೆಕಾರ್ಡ್ ಮಾಡಿಕೊಳ್ಳಲು ಅಡ್ಡಿಯಿಲ್ಲ. ಆದರೆ ಈ ವೀಡಿಯೋದಲ್ಲಿ ಪತ್ರಕರ್ತರನ್ನು ತೋರಿಸಬೇಡಿ, ಅವರನ್ನು ಬಿಟ್ಟು ಪತ್ರಿಕಾಗೋಷ್ಠಿ ನಡೆಸುವವರ ವೀಡಿಯೋ ತೆಗೆದುಕೊಳ್ಳಿ ಎಂದರು.
ಚುನಾವಣೆಯ ಸಂದರ್ಭದಲ್ಲಿ ನೂರಾರು ಪತ್ರಿಕಾಗೋಷ್ಠಿಗಳಿಗೆ ಹಾಜರಾಗಿರುವ ಪತ್ರಕರ್ತರಿಗೂ ಕೂಡ ಇದೊಂದು ಹೊಸ ಅನುಭವ ಆಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post