ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಾದ್ಯಂತ ಹೋಳಿ ಸಂಭ್ರಮ #HoliFestival ಮನೆ ಮಾಡಿದ್ದು, ನಗರದ ಗೋಪಿವೃತ್ತ ಬಣ್ಣಗಳ ಲೋಕವಾಗಿ ಮಾರ್ಪಟ್ಟು, ಸಂಸದ ರಾಘವೇಂದ್ರ ಅವರ ಉಪಸ್ಥಿತಿಯಿಂದ ಮತ್ತಷ್ಟು ರಂಗೇರಿತ್ತು.
ಕೆಲವೊಂದು ವಿರೋಧಗಳ ನಡುವೆಯೂ ನಗರದಲ್ಲಿ ಹೋಳಿ ಸಂಭ್ರಮ ಮುಗಿಲು ಮುಟ್ಟಿತ್ತು. ಪ್ರಮುಖವಾಗಿ ಗೋಪಿ ವೃತ್ತದಲ್ಲಿ ಹೋಳಿ ಹಬ್ಬಕ್ಕಾಗಿ ಭರ್ಜರಿ ತಯಾರಿ ಮಾಡಲಾಗಿತ್ತು. ಬೆಳಗಿನಿಂದಲೇ ಸಾವಿರಾರು ಯುವಕ ಯುವತಿಯರು ಗೋಪಿವೃತ್ತದಲ್ಲಿ ಜಮಾಯಿಸಿ ಬಣ್ಣ ಎರಚಿ ಸಂಭ್ರಮಿಸಿದರು.
ಹೋಳಿ ಆಡಲು ವೃತ್ತದಲ್ಲಿ ನೀರು, ಬಣ್ಣಗಳು, ಮೇಲಿನಿಂದ ಬಣ್ಣದ ನೀರು ಬೀಳುವ ವ್ಯವಸ್ಥೆ, ಡಿಜೆ ಸೇರಿದಂತೆ ಹಲವು ವ್ಯವಸ್ಥೆ ಮಾಡಲಾಗಿತ್ತು.
ಪ್ರಸಿದ್ಧ ಚಿತ್ರಗೀತೆಗಳಿಗೆ ಹುಚ್ಚೆದ್ದು ಕುಣಿದ ಯುವಕರ ಸಂಭ್ರಮ ಮುಗಿಲುಮುಟ್ಟಿತ್ತು.
ಗೋಪಿವೃತ್ತದಲ್ಲಿ ಕೇಸರಿ ಅಲಂಕಾರ ಸಮಿತಿವತಿಯಿಂದ ಹೋಳಿ ಹಬ್ಬದ ಪ್ರಯುಕ್ತ ಡಿ.ಜೆ.ನೃತ್ಯ ಮತ್ತು ದೊಡ್ಡ ಟ್ಯಾಂಕರ್‍ಗಳ ಮೂಲಕ ಕಾರಂಜಿ ನೃತ್ಯವನ್ನು ಕೂಡ ಆಯೋಜಿಸಲಾಗಿತ್ತು. ಬರಗಾಲದ ನೀರಿನ ಕೊರತೆಯ ಹಿನ್ನಲೆಯಲ್ಲಿ ಕಾರಂಜಿ ನೃತ್ಯವನ್ನು ಕಡಿಮೆಗೊಳಿಸಿ ಡಿಜೆಗೆ ಯುವಕ ಯುವತಿಯರು ಹೆಜ್ಜೆ ಹಾಕಿದ್ದು ಕಂಡುಬಂದಿತು.
ಒಬ್ಬರಿಗೊಬ್ಬರು ಬಣ್ಣದ ನೀರನ್ನು ಎರಚುವ ಮೂಲಕ ಕುಣಿದು ಕುಪ್ಪಳಿಸಿದರು.ಸಂಸದರಿಂದ ಮತ್ತಷ್ಟು ರಂಗು
ಇನ್ನು, ಪ್ರಮುಖವಾಗಿ ಕ್ರಿಯಾಶೀಲ ಹಾಗೂ ಯುವ ಸಂಸದ ಬಿ.ವೈ. ರಾಘವೇಂದ್ರ #BYRaghavendra ಅವರೂ ಸಹ ಗೋಪಿವೃತ್ತದಲ್ಲಿ ಹೋಳಿ ಸಂಭ್ರಮದೊಂದಿಭಾಗಿಯಾಗಿದ್ದು ಮತ್ತಷ್ಟು ಮೆರುಗು ಹೆಚ್ಚಿಸಿತ್ತು.
ಯುವಕರಿಗೆ ಹಬ್ಬದ ಶುಭ ಕೋರಿ ಬಣ್ಣ ಹೆಚ್ಚಿದ ಸಂಸದರು ಸಾಮಾನ್ಯರಂತೆ ಯಾವುದೇ ಹಮ್ಮುಬಿಮ್ಮುಗಳಿಲ್ಲದೇ ಪಾಲ್ಗೊಂಡಿದ್ದರು.
ಈ ಸಂಭ್ರಮದ ನಡುವೆ ನಟ ಪುನೀತ್ ರಾಜಕುಮಾರ್ ಹಾಡಿಗೆ ಸಂಸದ ರಾಘವೇಂದ್ರ ಭರ್ಜರಿಯಾಗಿ ಹೆಜ್ಜೆ ಹಾಕಿದ್ದು, ಇದರಿಂದ ಯುವಕರೂ ಸಹ ಹುಚ್ಚೆದ್ದು ಕುಣಿದರು.
ಇನ್ನು, ರಾಘವೇಂದ್ರ ಅವರಿಗೆ ಬಣ್ಣ ಹೆಚ್ಚಲು ನಾಮುಂದು, ತಾಮುಂದು ಎಂಬಂತೆ ಯುವಕರಲ್ಲಿ ಪೈಪೋಟಿ ನಡೆದಿತ್ತು. ಪ್ರಮುಖವಾಗಿ, ಸಂಸದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯುವಕರು ಮುಗಿಬಿದ್ದಿದ್ದು ಕಂಡುಬಂದಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post