ಒಂದು ಕಾಲವಿತ್ತು… ಬ್ರಾಹ್ಮಣರ ಜ್ಞಾನ, ಪ್ರಾಮಾಣಿಕತನ ಹಾಗೂ ಶ್ರದ್ಧೆಗೆ ಎಲ್ಲೆಡೆ ಪ್ರಾಶಸ್ತ್ರ್ಯ ದೊರೆಯುತ್ತಿತ್ತು. ಆದರೆ, ಯಾವಾಗ ದೇಶಕ್ಕೆ ಸ್ವಾತಂತ್ರ್ಯ ಬಂದು ಸಂವಿಧಾನದಿಂದ ಜಾತ್ಯತೀತ ಎಂಬ ಕಲ್ಪನೆ ದೊರೆಯಿತು ಅಲ್ಲಿಗೆ ಬ್ರಾಹ್ಮಣರ ತುಳಿತ ಆರಂಭವಾಯಿತು ಎಂಬುದು ಇತಿಹಾಸದ ಪುಟಗಳಲ್ಲಿ ಇಂದಿಗೂ ಕಣ್ಣೀರಿಡುತ್ತಿವೆ.
ಅತ್ಯಂತ ಪ್ರಮುಖವಾಗಿ ರಾಜಕಾರಣವನ್ನು ಗಮನಿಸುವುದಾದರೆ ಬ್ರಾಹ್ಮಣರನ್ನು ವ್ಯವಸ್ಥಿತವಾಗಿ ತುಳಿಯುತ್ತಾ ಬಂದಿದ್ದು ಮಾತ್ರವಲ್ಲದೇ, ಮುಖ್ಯವಾಹಿನಿಯಿಂದ, ಆಯಕಟ್ಟಿನ ಜಾಗದಿಂದ ಹೊರಗಿಡುತ್ತಾ ಬರಲಾಗಿದೆ. ಇಂತಹ ಶೋಷಣೆಗೆ ಶಿವಮೊಗ್ಗ ಜಿಲ್ಲೆಯೂ ಹೊರತಲ್ಲ.
ಜಿಲ್ಲಾ ರಾಜಕಾರಣವನ್ನು ಒಮ್ಮೆ ತಿರುವಿ ನೋಡಿದರೆ ಬ್ರಾಹ್ಮಣರನ್ನು ಮೂಲೆಗುಂಪು ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಕೆಲವೊಂದು ಸಣ್ಣ ಪುಟ್ಟ ಅವಕಾಶಗಳನ್ನು ಜಿಲ್ಲಾ ರಾಜಕಾರಣದಲ್ಲಿ ನೀಡಲಾಗಿದೆ ಎಂಬುದನ್ನು ಹೊರತುಪಡಿಸಿದರೆ, ಅವಕಾಶಕ್ಕೆ ತಕ್ಕಂತ ಬ್ರಾಹ್ಮಣರನ್ನು ಬಳಸಿಕೊಂಡವರೇ ಅಧಿಕ.
ಪ್ರಮುಖವಾಗಿ, ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ನೋಡುವುದಾದರೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರೂ ಪಕ್ಷಗಳು ಬ್ರಾಹ್ಮಣರನ್ನು ಕಡೆಗಣಿಸುತ್ತಲೇ ಬಂದಿದೆ.
ಬಿಜೆಪಿ ವಿಚಾರವಾಗಿ ನೋಡುವುದಾದರೆ, ಇಲ್ಲೂ ಸಹ ಬ್ರಾಹ್ಮಣ ಸಮುದಾಯಕ್ಕೆ ಮಹತ್ವದ್ದು ಎಂಬ ಕೊಡುಗೆ ಹಾಗೂ ಅವಕಾಶಗಳೇನೂ ದೊರೆತಿಲ್ಲ. ಜಾತಿ ಲೆಕ್ಕಾಚಾರ ಎಂಬ ಹಣೆಪಟ್ಟಿಯ ಅಡಿಯಲ್ಲಿ ವಿಪ್ರ ಸಮುದಾಯವನ್ನು ನಿರ್ಧಿಷ್ಟ ದೂರದಲ್ಲಿಡಲಾಗಿದೆ.
1952 ನಡೆದ ಮೊದಲ ಲೋಕಸಭಾ ಚುನಾವಣೆಯಿಂದ 2014ರ ಚುನಾವಣೆಯವರೆಗೂ ಒಮ್ಮೆ ಹಿಂತಿರುಗಿ ನೋಡಿದರೆ, ಎಲ್ಲ ಪಕ್ಷಗಳೂ ಸಹ ಬ್ರಾಹ್ಮಣರನ್ನು ನಿರ್ಲಕ್ಷಿಸಿವೆ.
ಈ ಕೆಳಗಿನ ಪಟ್ಟಿಯನ್ನೊಮ್ಮೆ ನೋಡಿ
Year |
Candidates |
Winner |
Political Party |
Runner-up |
---|---|---|---|---|
1951 | NA | K. G. Wodeyar | INC | T. L. Kalliah(SP) |
1957 | NA | K. G. Wodeyar | INC | T. L. Kallaiah(PSP) |
1962 | NA | S. V. Krishnamoorthy Rao | INC | V. K. Lakshmana Gowda(PSP) |
1967 | NA | J. H. Patel | SSP | H.s. Rudrappa(INC) |
1971 | 3 | T. V. C Veerabasappa | INC | J. H. Patel(SSP) |
1977 | 2 | A. R. Badarinarayan | INC | J. H. Patel(BLD) |
1980 | 11 | T. V. Chandrashekarappa | INC | D. G. Shivannagowda(BJP) |
1984 | 11 | T. V. Chandrashekarappa | INC | D. G. Shivannagowda(BJP) |
1989 | NA | T.v.chandrashekarappa | INC | M.kotoji Rao(JD) |
1991 | 17 | K.g. Shivappa | INC | B.s. Yediyurappa(BJP) |
1996 | 17 | S Bangarappa | KCP | Ayanur Manjunatha(BJP) |
1999 | 5 | S.bangarappa | INC | Ayanur Manjunatha(BJP) |
2004 | 6 | S. Bangarappa | BJP | Ayanur Manjunath(INC) |
2009 | 12 | B.Y. RAGHAVENDRA | BJP | S. BANGARAPPA(INC) |
2005ರಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಎಂ.ಬಿ. ಭಾನುಪ್ರಕಾಶ್ ಅವರಿಗೆ ಟಿಕೇಟ್ ನೀಡಲಾಗಿತ್ತು ಎನ್ನುವುದರ ಹೊರತಾಗಿ, ಇಲ್ಲಿ ಬ್ರಾಹ್ಮಣರಿಗೆ ಅವಕಾಶಗಳು ಮರೀಚಿಕೆಯಾಗಿದೆ.
ಇನ್ನು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಸ್ತುತ ಬ್ರಾಹ್ಮಣ ಮತದಾರರ ಅಂದಾಜು ಸಂಖ್ಯೆಯನ್ನೊಮ್ಮೆ ನೋಡಿ.
- ಶಿವಮೊಗ್ಗ – 32000
- ಸಾಗರ – 28000
- ತೀರ್ಥಹಳ್ಳಿ – 20000
- ಹೊಸನಗರ – 15000
- ಸೊರಬ – 8000
- ಶಿಕಾರಿಪುರ – 8000
- ಭದ್ರಾವತಿ – 8000
ಅಂದರೆ ಒಟ್ಟು ಜಿಲ್ಲೆಯಲ್ಲಿ ಅಂದಾಜು 1,19000 ದಷ್ಟು(ಸ್ವಲ್ಪ ಹೆಚ್ಚು ಕಡಿಮೆ) ಬ್ರಾಹ್ಮಣ ಮತದಾರರು ಇದ್ದಾರೆ. ಇಷ್ಟು ಸಂಖ್ಯೆಯಲ್ಲಿ ಬ್ರಾಹ್ಮಣ ಮತದಾರರು ಇದ್ದಾಗ್ಯೂ ವಿಪ್ರರಿಗೆ ಬಿಜೆಪಿ ಅವಕಾಶವನ್ನು ನೀಡುತ್ತಿಲ್ಲ ಎಂದರೆ ಇದು ನಿಜಕ್ಕೂ ಅನ್ಯಾಯವೇ ಹೌದು.
ಭಾರತೀಯ ಜನತಾ ಪಕ್ಷ ಹಿಂದೂ ಪರ ಪಕ್ಷ, ಬ್ರಾಹ್ಮಣರ ಪರವಾದ ಪಕ್ಷ ಎಂದು ಹೇಳಿಕೊಂಡಿರುವುದೇ ವಿನಾ, ಜಿಲ್ಲೆಯಲ್ಲಿ ವಿಪ್ರ ಸಮುದಾಯಕ್ಕೆ ಸರಿಯಾದ ಅವಕಾಶವನ್ನುನೀಡಿಲ್ಲ ಎನ್ನುವುದು ಸತ್ಯ.
1980ರಿಂದೀಚೆಗೆ ನೋಡಿ: 1980ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಡಿ.ಜಿ. ಶಿವಾನಂದಗೌಡ ಅವರಿಗೆ ಟಿಕೇಟ್ ನೀಡಲಾಗಿತ್ತು. ಆನಂತರ 1984ರಲ್ಲೂ ಸಹ ಅವರನ್ನೇ ಅಭ್ಯರ್ಥಿಯನ್ನಾಗಿಸಲಾಗಿದ್ದು, ಎರಡನೆಯ ಸ್ಥಾನ ಪಡೆದು ಸೋತಿದ್ದರು.
ಇನ್ನು 1989ರ ಚುನಾವನೆಯಲ್ಲೂ ಸಹ ಬಿಜೆಪಿ ಗೆಲುವು ಸಾಧಿಸಲಿಲ್ಲ. ಆನಂತರ 1991ರಲ್ಲಿ ಬಿ.ಎಸ್. ಯಡಿಯೂರಪ್ಪ ಅಭ್ಯರ್ಥಿಯಾಗಿದ್ದರೆ, 1996 ಹಾಗೂ 1999ರಲ್ಲಿಯೂ ಆಯನೂರು ಮಂಜುನಾಥ್ ಅಭ್ಯರ್ಥಿಯಾಗಿದ್ದರು.
2004ರ ಚುನಾವಣೆ ವೇಳೆಗೆ ಬಿಜೆಪಿಗೆ ಬಂದಿದ್ದ ಎಸ್. ಬಂಗಾರಪ್ಪ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರೆ, 2009ರಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಅವರನ್ನು ಅಭ್ಯರ್ಥಿಯನ್ನಾಗಿಸಿ ಬಿಜೆಪಿ ಗೆದ್ದಿತ್ತು. ಹಾಗೆಯೇ, 2014ರಲ್ಲಿ ಬಿ.ಎಸ್. ಯಡಿಯೂರಪ್ಪ ಅಭ್ಯರ್ಥಿಯಾಗಿ ಐತಿಹಾಸಿಕ ಗೆಲವು ಸಾಧಿಸಿದ್ದರು.
ಈಗ, ಶಿಕಾರಿಪುರದಿಂದ ಶಾಸಕರಾಗಿರುವ ಬಿ.ಎಸ್. ಯಡಿಯೂರಪ್ಪ ಅವರು ಸಾಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದ್ದು, ಬಿಜೆಪಿ ಅಭ್ಯರ್ಥಿ ಯಾರು ಎಂಬ ಕುರಿತಾಗಿ ಕುತೂಹಲ ಕೆರಳಿಸಿದೆ.
ಗೆಲ್ಲುವ ಅಭ್ಯರ್ಥಿ ಎಂಬ ಕಾರಣಕ್ಕೆ ಪ್ರತಿ ಬಾರಿಯೂ ಜಾತಿ, ಧರ್ಮದ ಮತಗಳ ಲೆಕ್ಕಾಚಾರದಲ್ಲಿ ಟಿಕೇಟ್ ನೀಡುತ್ತಾ ಬಂದರೆ, ಉಳಿದ ಜನಾಂಗದ ನಾಯಕರು, ಕಾರ್ಯಕರ್ತರ ಬೆಳವಣಿಗೆ ಹೇಗೆ ಎಂಬುದನ್ನು ಪಕ್ಷ ಅರಿಯದೇ ಇರುವುದು ದುರಂತ. ಪಕ್ಷಕ್ಕಾಗಿ ದುಡಿಯುವ ಮುಖಂಡರು, ಕಾರ್ಯಕರ್ತರನ್ನು ಪರಿಗಣಿಸುವಾಗ ಮುಖ್ಯವಾಗದ ಲೆಕ್ಕಾಚಾರ, ಬ್ರಾಹ್ಮಣ ಸೇರಿದಂತೆ ಬೇರೆ ಜನಾಂಗದವರ ಮತ ಹಾಕಿಕೊಳ್ಳುವಾಗ ಇಲ್ಲದ ಲೆಕ್ಕಾಚಾರ ಟಿಕೇಟ್ ನೀಡುವಾಗ ಮಾತ್ರ ಯಾಕೆ ಎಂಬುದು ಪ್ರಶ್ನೆ?
ಇಷ್ಟು ವರ್ಷ ಆಗಿದ್ದು ಆಗಿದೆ. ಇನ್ನು ಮುಂದೆ ಬರುವ ಉಪ ಚುನಾವಣೆ ಹಾಗೂ 2019ರಲ್ಲಿ ಎದುರಾಗುವ ಚುನಾವಣೆಯಲ್ಲಾದರೂ ಬ್ರಾಹ್ಮಣರಿಗೆ ಅವಕಾಶ ನೀಡಬೇಕಿದೆ.
ಇತರೆ ಜನಾಂಗದ ಮತದಾರರ ಸಂಖ್ಯೆ ಬ್ರಾಹ್ಮಣರ ಸಂಖ್ಯೆಗಿಂತಲೂ ಹೆಚ್ಚಿದೆ ಎಂಬ ಲೆಕ್ಕಾಚಾರವನ್ನು ಪಕ್ಷ ಹಾಕಬಹುದು. ಹಾಗಿದ್ದರೆ, ಬ್ರಾಹ್ಮಣ ಮುಖಂಡರೊಬ್ಬರಿಗೆ ಟಿಕೇಟ್ ನೀಡಿ, ಅವರನ್ನು ಗೆಲ್ಲಿಸುವಲ್ಲಿ ಪಕ್ಷ ಸಂಪೂರ್ಣವಾಗಿ ಶ್ರಮಿಸಿ, ಗೆಲ್ಲಿಸಲಿ.. ಆಗ ಅದು ಪಕ್ಷದ ಸರ್ವ ಜನಾಂಗದ ಶಾಂತಿಯ ತೋಟವಾದೀತು.
ಹೀಗಾಗಿ, ಈ ನಿಟ್ಟಿನಲ್ಲಿ ಪಕ್ಷ ಹಾಗೂ ಮುಖಂಡರು ವರಿಷ್ಠರ ಗಮನಕ್ಕೆ ತಂದು, ಈ ಬಾರಿಯಾದರೂ ವಿಪ್ರ ಸಮುದಾಯಕ್ಕೆ ಬಿಜೆಪಿಯಲ್ಲಿ ಆದ್ಯತೆ ಸಿಗಲಿ.. ಪಕ್ಷ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತದೆಯೇ?
Discussion about this post