ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಮೈಸೂರು |
ನೈಋತ್ಯ ರೈಲ್ವೆಯು ನವೆಂಬರ್ 2, 2025 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16221 ತಾಳಗುಪ್ಪ–ಮೈಸೂರು ಕುವೆಂಪು ಡೈಲಿ ಎಕ್ಸ್ ಪ್ರೆಸ್ ರೈಲಿನ #Talaguppa-Mysore Kuvempu Express Train ವೇಳಾಪಟ್ಟಿಯನ್ನು ಪರಿಷ್ಕರಿಸಲು ನಿರ್ಧರಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಈ ರೈಲು ತಾಳಗುಪ್ಪದಿಂದ ಬೆಳಿಗ್ಗೆ 5.50ಕ್ಕೆ ಹೊರಡಲಿದೆ. ಪ್ರಸ್ತುತ ನಿರ್ಗಮನ ಸಮಯವಾದ ಬೆಳಿಗ್ಗೆ 6.15 ರಿಂದ 25 ನಿಮಿಷಗಳಷ್ಟು ಮುಂಚಿತವಾಗಿ ಈ ರೈಲು ಹೊರಡಲಿದೆ.
ಈ ಬದಲಾವಣೆಯಿಂದಾಗಿ, ರೈಲು ಸಂಖ್ಯೆ 16227 ಮೈಸೂರು–ತಾಳಗುಪ್ಪ ಡೈಲಿ ಎಕ್ಸ್ ಪ್ರೆಸ್ ರೈಲು ತಾಳಗುಪ್ಪ ತಲುಪುವ ಸಮಯವನ್ನೂ ಸಹ ಅದೇ ದಿನಾಂಕದಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ. ಈ ರೈಲು ಬೆಳಿಗ್ಗೆ 7.15ರ ಬದಲಿಗೆ 7.50ಕ್ಕೆ ತಾಳಗುಪ್ಪ ತಲುಪಲಿದೆ.
ರೈಲು ಸಂಖ್ಯೆ 16221ರ ಪರಿಷ್ಕೃತ ವೇಳಾಪಟ್ಟಿ ವಿವರಗಳು ಹೀಗಿವೆ: ಈ ರೈಲು ತಾಳಗುಪ್ಪದಿಂದ ಬೆಳಿಗ್ಗೆ 5.50ಕ್ಕೆ ಹೊರಡಲಿದ್ದು, ವಿವಿಧ ನಿಲ್ದಾಣಗಳಿಗೆ ಆಗಮನ ಮತ್ತು ನಿರ್ಗಮನ ಸಮಯ ಈ ಕೆಳಗಿನಂತಿವೆ: ಸಾಗರ ಜಂಬಗಾರು-ಬೆಳಿಗ್ಗೆ 6.08/6.10, ಅಡ್ಡೇರಿ-ಬೆಳಿಗ್ಗೆ 6.26/6.27, ಆನಂದಪುರಂ-ಬೆಳಿಗ್ಗೆ 6.40/6.42, ಕೆಂಚನಾಲ ಹಾಲ್ಟ್-ಬೆಳಿಗ್ಗೆ 6.54/6.55, ಅರಸಾಳು-ಬೆಳಿಗ್ಗೆ 7.00/7.01, ಕುಂಸಿ-ಬೆಳಿಗ್ಗೆ 7.17/7.18, ಹಾರನಹಳ್ಳಿ-ಬೆಳಿಗ್ಗೆ 7.25/7.26, ಕೊನಗವಳ್ಳಿ-ಬೆಳಿಗ್ಗೆ 7.31/7.32, ಶಿವಮೊಗ್ಗ ಟೌನ್-ಬೆಳಿಗ್ಗೆ 7.50/7.55, ಶಿವಮೊಗ್ಗ-ಬೆಳಿಗ್ಗೆ 8.01/8.02, ಭದ್ರಾವತಿ-ಬೆಳಿಗ್ಗೆ 8.18/8.20, ಮಸರಹಳ್ಳಿ-ಬೆಳಿಗ್ಗೆ 8.26/8.27, ತರೀಕೆರೆ-ಬೆಳಿಗ್ಗೆ 8.42/8.43, ಕೋರನಹಳ್ಳಿ-ಬೆಳಿಗ್ಗೆ 8.53/8.54, ಶಿವಪುರ-ಬೆಳಿಗ್ಗೆ 9.01/9.02, ಬೀರೂರು-ಬೆಳಿಗ್ಗೆ 9.33/9.35, ಕಡೂರು-ಬೆಳಿಗ್ಗೆ 9.45/9.47, ಬಳ್ಳೇಕೆರೆ ಹಾಲ್ಟ್-ಬೆಳಿಗ್ಗೆ 9.56/9.57, ದೇವನೂರು-ಬೆಳಿಗ್ಗೆ 10.08/10.09, ಬಾಣಾವರ-ಬೆಳಿಗ್ಗೆ 10.19/10.20, ಅರಸೀಕೆರೆ-ಬೆಳಿಗ್ಗೆ 10.40/10.50, ಹಬ್ಬನಘಟ್ಟ-ಬೆಳಿಗ್ಗೆ 11.05/11.06, ಬಾಗೇಶಪುರ-ಬೆಳಿಗ್ಗೆ 11.23/11.24, ಹಾಸನ-ಬೆಳಿಗ್ಗೆ 11.45/11.47, ಮಾವಿನಕೆರೆ-ಮಧ್ಯಾಹ್ನ 12.09/12.10, ಹೊಳೆನರಸೀಪುರ-ಮಧ್ಯಾಹ್ನ 12.25/12.27, ಮಂದಗೆರೆ-ಮಧ್ಯಾಹ್ನ 12.55/12.57, ಬೀರಹಳ್ಳಿ-ಮಧ್ಯಾಹ್ನ 1.07/1.08, ಅಕ್ಕಿಹೆಬ್ಬಾಳು-ಮಧ್ಯಾಹ್ನ 1.15/1.16, ಹೊಸ ಅಗ್ರಹಾರ-ಮಧ್ಯಾಹ್ನ 1.26/1.27, ಕೃಷ್ಣರಾಜನಗರ-ಮಧ್ಯಾಹ್ನ 1.50/1.52, ಸಾಗರಕಟ್ಟೆ-ಮಧ್ಯಾಹ್ನ 2.30/2.32, ಬೆಳಗುಳ-ಮಧ್ಯಾಹ್ನ 2.58/3.00, ಹಾಗೂ ಮೈಸೂರು ಜಂಕ್ಷನ್’ಗೆ ಪ್ರಸ್ತುತ ಆಗಮನ ಸಮಯವಾದ ಮಧ್ಯಾಹ್ನ 3.30ಕ್ಕೆ ತಲುಪಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post