ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಶ್ರೀ ಶಾರದಾ ಸಂಗೀತ ವಿದ್ಯಾಲಯ ವತಿಯಿಂದ ನ.17ರ ಗುರುವಾರ “ನಾಡ ದೀವಿಗೆ ನಾದ ದೀವಿಗೆ” ವಿಶೇಷವಾಗಿ ಗೀತ-ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಕುವೆಂಪು ರಂಗಮಂದಿರದಲ್ಲಿ ಸಂಜೆ 6.30ಕ್ಕೆ ಆರಂಭವಾಗಲಿರುವ ಈ ಕಾರ್ಯಕ್ರಮದಲ್ಲಿ ವಿದ್ಯಾಲಯದ ಮಕ್ಕಳಿಂದ ಕನ್ನಡ ಗೀತೆಗಳ ಗಾಯನ ಹಾಗೂ ಶಾಸ್ತ್ರೀಯ ನೃತ್ಯ ಪ್ರದರ್ಶನವೂ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿದ್ಯಾಲಯದ ಇನ್ನೊಂದು ಶಾಖೆಯಾಗಿ ಕಥಕ್ ನೃತ್ಯಶಾಲೆಯನ್ನು ಹಿರಿಯ ನೃತ್ಯಗುರುಗಳೂ, ಮನುಕಲಾಕೇಂದ್ರದ ಪ್ರಾಂಶುಪಾಲರೂ ಆದ ವಿದುಷಿ ಗೀತಾ ದಾತಾರ್ ರವರು ಉದ್ಘಾಟಿಸಲಿದ್ದಾರೆ.

ಶಿವಮೊಗ್ಗೆಯಲ್ಲಿ ಸಂಗೀತದ ಹಲವಾರು ವಿಶಿಷ್ಟ ಪರಿಕಲ್ಪನೆಯುಳ್ಳ ಕಾರ್ಯಕ್ರಮಗಳನ್ನು ನೀಡುತ್ತಾ ಸಂಗೀತ ಕಲೆಯ ಪ್ರಾಮುಖ್ಯತೆಯನ್ನು ತಿಳಿಸಿಕೊಡುತ್ತಿರುವ ಸಂಸ್ಥೆ ಶ್ರೀ ಶಾರದಾ ಸಂಗೀತ ವಿದ್ಯಾಲಯ. ನಗರದ ಎಸ್. ಪಿ. ಎಂ. ರಸ್ತೆಯಲ್ಲಿ ದಶಕಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ನೀಡುತ್ತಾ, ವಿದ್ಯಾರ್ಥಿಗಳಿಗೂ ಸಂಗೀತಾಸಕ್ತರಿಗೂ ಹಾಗೇ ಜನಸಾಮಾನ್ಯರಿಗೂ ಸಂಗೀತದ ವಿವಿಧ ಆಯಾಮಗಳನ್ನು ತಿಳಿಸಿಕೊಡುವ ಪರಂಪರಾ, ಸಂಗೀತದಲ್ಲಿ ಮನಃಶಾಸ್ತ್ರ, ನಾದಾನುಸಂಧಾನ, ಗುರುಪೂರ್ಣಿಮೆ, ಶ್ರೀತ್ಯಾಗಬ್ರಹ್ಮೋತ್ಸವ- ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.

ಹೆಚ್ಚಿನ ಮಾಹಿತಿಗಾಗಿ 98444-44820 ಸಂಪರ್ಕಿಸಬಹುದಾಗಿದೆ.
ವಿಶೇಷ ಸೂಚನೆ: ಕಾರ್ಯಕ್ರಮವು ಸಮಯಕ್ಕೆ ಸರಿಯಾಗಿ ಆರಂಭವಾಗುತ್ತದೆ. ಹತ್ತು ನಿಮಿಷ ಮುಂಚಿತವಾಗಿ ಬಂದು ಆಸೀನರಾಗಬೇಕಾಗಿ ವಿನಂತಿ.












Discussion about this post