ಲೆಕ್ಕಪರಿಶೋಧಕ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಎಂ.ಜಿ.ರಾಮಚಂದ್ರಮೂರ್ತಿ (69) ಅವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ. ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ, ಜಿಲ್ಲಾ ಬ್ರಾಹ್ಮಣ ಮಹಾಸಭಾದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
Also read: ಕೇಂದ್ರ ಬಜೆಟ್ 2024-25 | ಯಾವುದರ ಬೆಲೆ ಅಗ್ಗ, ಯಾವುದರ ಬೆಲೆ ದುಬಾರಿ? ಇಲ್ಲಿದೆ ಪಟ್ಟಿ
ರೋಟರಿ ಬೈಯೊಡೈವರ್ಸಿಟಿ ಪಾರ್ಕ್‌ನ ಸ್ಥಾಪಕರಾಗಿ, ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಟಾನದಲ್ಲಿ ಸಕ್ರಿಯರಾಗಿದ್ದರು. ಕೋಟೆ ರಸ್ತೆಯಲ್ಲಿರುವ ಮೃತರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಎಂ.ಜಿ.ಆರ್ ಅವರ ನಿಧನಕ್ಕೆ ಎನ್ಇಎಸ್ ಆಡಳಿತ ಮಂಡಳಿ ಸದಸ್ಯರು, ಆಜೀವ ಸದಸ್ಯರು, ಸಂಸ್ಥೆಯ ಸಿಬ್ಬಂದಿ ವರ್ಗ ತೀವ್ರ ಸಂತಾಪ ಸೂಚಿಸಿದೆ.




















