ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯವರ ನಿರ್ಲಕ್ಷತನದಿಂದ ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಮೃತದೇಹ ಅದಲು ಬದಲು ಆಗಿರುವ ಘಟನೆ ನಡೆದಿದೆ.
ಸುಮಾರು 55 ವರ್ಷದ ನ್ಯಾಮತಿಯ ವ್ಯಕ್ತಿಯೋರ್ವರು ಕಳೆದ 6 ದಿನಗಳ ಹಿಂದೆ ಮೆಗ್ಗಾನ್‌ಗೆ ದಾಖಲಾಗಿ ಇಂದು ಬೆಳಗ್ಗಿನ ಜಾವ ಸೋಂಕಿನಿಂದ ಮೃತಪಟ್ಟಿದ್ದಾರೆ. ಆದರೆ ಮೃತಪಟ್ಟ ಈ ವ್ಯಕ್ತಿಯ ಬದಲಿಗೆ ಶಿವಪ್ರಿಯ ಲೇಔಟ್‌ನ ನಿವಾಸಿಯ ಮೃತದೇಹವನ್ನು ತೆಗೆದುಕೊಂಡು ಹೋಗಿ ಇನ್ನೇನು ಅಂತ್ಯ ಸಂಸ್ಕಾರ ಮಾಡಬೇಕು ಅಷ್ಟರಲ್ಲಿ ಮಾರ್ಚರಿಯಿಂದ ಫೋನ್ ಹೋಗಿದ್ದು ಮೃತದೇಹವನ್ನು ವಾಪಾಸ್ ತೆಗೆದುಕೊಂಡು ಬರಲು ಸೂಚಿಸಲಾಗಿರುತ್ತದೆ.
ಮೃತದೇಹವನ್ನ ವಾಪಾಸ್ ತರಲು ಒಲ್ಲದ ಮೃತರ ಕುಟುಂಬಸ್ಥರು ಇನ್ನೇನು ಬದಲಿ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿ ಅವರ ಪುತ್ರ ನ್ಯಾಮತಿಯವರೆಗೆ ಹೋಗಿ ಅದಲು ಬದಲಾದ ತಂದೆಯ ಮೃತದೇಹವನ್ನ ತೆಗೆದುಕೊಂಡು ಬಂದಿರುತ್ತಾರೆ.
ಮೃತ ನ್ಯಾಮತಿ ನಿವಾಸಿಯ ಮೃತದೇಹವನ್ನು ಮುಖವೊಂದನ್ನ ಬಿಟ್ಟು ಪ್ಲಾಸ್ಟಿಕ್‌ನಲ್ಲಿ ಸುತ್ತಲಾಗಿತ್ತು. ಆದರೆ ವಾಹನದಲ್ಲಿ ಇಡುವ ಸಂದರ್ಭದಲ್ಲಿ ಮಾರ್ಚರಿ ಸಿಬ್ಬಂದಿ ಶಿವಪ್ರಿಯ ಲೇಔಟ್‌ನ ವ್ಯಕ್ತಿಯ ದೇಹವನ್ನು ನ್ಯಾಮತಿ ನಿವಾಸಿಯ ಕುಟುಂಬಕ್ಕೆ ಹಸ್ತಾಂತರಿಸಿದ್ದರು. ಮೆಗ್ಗಾನ್‌ನಲ್ಲಿ ಸುಮಾರು ಹೊತ್ತಿನ ನಂತರ ಶಿವಪ್ರಿಯ ಲೇಔಟ್‌ನ ನಿವಾಸಿ ಅವರ ಪುತ್ರ ಮುಖ ನೋಡಿ ಇದು ನನ್ನ ತಂದೆಯ ಮೃತ ದೇಹವಲ್ಲವೆಂದು ಹೇಳಿದ ನಂತರ ಸಮಸ್ಯೆ ಎದುರಾಗಿದೆ.
ಭದ್ರಾವತಿಯ ಮೃತದೇಹವನ್ನೂ ಸಹ ಮಾರ್ಚರಿಗೆ ಕರೆಯಿಸಿ ತಪಾಸಣೆ ನಡೆಸಿದಾಗ ಸಮಸ್ಯೆ ಉದ್ಭವಿಸಿದ್ದು ನ್ಯಾಮತಿಗೆ ಹೋಗಿ ತಪಾಸಣೆ ನಡೆಸಿದಾಗ ನ್ಯಾಮತಿಯ ಕುಟುಂಬದವರು ತೆಗೆದುಕೊಂಡು ಹೋಗಿರುವುದು ತಿಳಿದುಬರುತ್ತದೆ. ಇದು ಮೆಗ್ಗಾನ್ ಸಿಬ್ವಂದಿಗಳ ನಿರ್ಲಕ್ಷತನಕ್ಕೆ ಸಾಕ್ಷಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post