ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಬನ್ನೇರುಘಟ್ಟದಿಂದ ಎರಡು ಸಿಂಹಗಳ ಆಗಮನವಾಗಿದ್ದು, ಪ್ರಸ್ತುತ ಹೊಸ ಸೇರ್ಪಡೆಯಿಂದ ಸಿಂಹಗಳ ಸಂಖ್ಯೆ 4ರಿಂದ 6ಕ್ಕೆ ಏರಿಕೆಯಾಗಿದೆ.
13 ವರ್ಷಗಳಿಂದ ಸಿಂಹಧಾಮದಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆದಿಲ್ಲ. ಏಳು ವರ್ಷದ ಸುಚಿತ್ರಾ, ಯಶವಂತ ಜೋಡಿ ಆಗಮನದಿಂದ ಸಂತಾನಾಭಿವೃದ್ಧಿಯ ನಿರೀಕ್ಷೆ ಮೂಡಿಸಿದ್ದು, ಚಾಮುಂಡಿ ಹುಲಿಗೆ ಜನಿಸಿದ್ದ ವಿಜಯದಶಮಿಯೇ ಕೊನೆಯ ಮರಿಯಾಗಿದೆ.
ಅವುಗಳ ಹೊಂದಾಣಿಕೆಗೆ ಮೊದಲ ಆದ್ಯತೆ ನೀಡಲಾಗುವುದು. ನಂತರ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಲಯನ್ ಸಫಾರಿ ಡಿಸಿಎಫ್ ಮುಕುಂದ್ ಚಂದ್ ಮಾಹಿತಿ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post