ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಾಜವನ್ನು ಪೀಡಿಸುತ್ತಿರುವ ಮಾದಕ ವ್ಯಸನದಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ. ವ್ಯಸನವನ್ನು ತಡೆಗಟ್ಟಲು ರೋಟರಿ ಕ್ಲಬ್ ರೂಪಿಸಿರುವ ಹೊಸ ಯೋಜನೆ ಸಹಾಕಾರಿಯಾಗುತ್ತದೆ ಎಂದು ರೊ. ಪ್ರೊ. ಎ.ಎಸ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಶುಕ್ರವಾರ ರೋಟರಿ #Rotary ಮಿಡ್ ಟೌನ್ ಸಭಾಂಗಣದಲ್ಲಿ ನಡೆದ ಪದಪ್ರಧಾನ ಸಮಾರಂಭದಲ್ಲಿ ಕಾರ್ಯಕ್ರಮದ ಪದಪ್ರಧಾನ ಅಧಿಕಾರಿಯಾಗಿ ಆಗಮಿಸಿದ್ದ ಅವರು, ಮಾದಕ ವ್ಯಸನ ತಡೆ ಜಾಗೃತಿಗಾಗಿ ಕ್ಲಬ್ ನ ಹೊಸ ಯುಟ್ಯೂಬ್ ಚಾನೆಲ್ ‘ನವ್ಯ ಸಂಕಲ್ಪ’ ಕ್ಕೆ ಚಾಲನೆ ನೀಡಿ, ಈ ನಿಟ್ಟಿನಲ್ಲಿ ಕ್ಲಬ್ ರೂಪಿಸಿರುವ ಹೊಸ ಯೋಜನೆಗೆ ಶುಭಕೋರಿದರು.

ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷ ರೊ.ಮುಸ್ತಾಕ್ ಅಲಿಶಾ.ಟಿ.ಎಂ ಮಾತನಾಡಿ, ಯುವ ಜನತೆಯಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನವನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿ, ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ವತಿಯಿಂದ ರೂಪಿಸಿರುವ ಹೊಸ ಯೋಜನೆಯು ಬಹಳ ಉಪಯುಕ್ತವಾಗಿದೆ. ಇತರೆ ಕ್ಲಬ್ ಗಳು ಹಾಗೂ ಸಾರ್ವಜನಿಕರೂ ಸಹ ರೋಟರಿ ಕ್ಲಬ್ ನೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು.

Also read: ಕೃಷಿಗೆ ಆದ್ಯತೆಯಿಂದ ದೇಶದ ಸಮಗ್ರ ಅಭಿವೃದ್ಧಿ: ಸಚಿವ ಚಲುವರಾಯಸ್ವಾಮಿ
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರೊ. ಪ್ರಕಾಶ್ ಮೂರ್ತಿ, 2023-24 ನೇ ಸಾಲಿನಲ್ಲಿ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಪಕ್ಷಿನೋಟ ಪ್ರಸ್ತುತ ಪಡಿಸಿದರು. ನೂತನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ರೊ.ಶ್ರೀಕಾಂತ್.ಎ.ವಿ, 2024-25 ನೇ ಸಾಲಿನಲ್ಲಿ ಹಮ್ಮಿಕೊಳ್ಳಲ್ಲಿರುವ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಜೊತೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಐದು ಜನ ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್, ಪುಸ್ತಕ ಹಾಗೂ ಧನಸಹಾಯವನ್ನು ಸಹ ನೀಡಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post