ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ನವದೆಹಲಿ |
ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾದ ಬೆನ್ನಲ್ಲೇ ತಮ್ಮ ಹಿಂದಿನ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿರುವ ಸಂಸದ ಬಿ.ವೈ. ರಾಘವೇಂದ್ರ #B Y Raghavendra ಅವರು ಜಿಲ್ಲೆಯ ಹಲವು ಹೊಸ ರೈಲು ಮಾರ್ಗಗಳ ನಿರ್ಮಾಣಕ್ಕೆ ಪ್ರಯತ್ನ ನಡೆಸಿದ್ದಾರೆ.
ಈ ಕುರಿತಂತೆ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ #Railway Minister Ashwin Vaishnav ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಸಂಸದರು, ಪ್ರಮುಖವಾಗಿ ಯಶವಂತಪುರ ಹಾಗೂ ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು #Vandebharath Train ಸಂಚಾರ ಆರಂಭಕ್ಕೆ ಮನವಿ ಮಾಡಿದ್ದಾರೆ.
Also read: ಶಿವಮೊಗ್ಗದಲ್ಲೊಂದು ವಿಚಿತ್ರ ಕೇಸ್ | ರಾತ್ರಿ ಯುವತಿ ಕಿಡ್ನಾಪ್, ಬೆಳಗ್ಗೆ ಪತ್ತೆ | ಇಷ್ಟಕ್ಕೂ ನಡೆದಿದ್ದೇನು?
ಯಾವೆಲ್ಲಾ ಯೋಜನೆಗಳಿಗೆ ಮನವಿ?
- ಯಶವಂತಪುರ-ಶಿವಮೊಗ್ಗ-ಯಶವಂತಪುರ ವಂದೇ ಭಾರತ್ ಎಕ್ಸ್’ಪ್ರೆಸ್ ಆರಂಭ
- ತಾಳಗುಪ್ಪ-ಸಿರ್ಸಿ-ತಡಸ-ಹುಬ್ಬಳ್ಳಿ ಹೊಸ ರೈಲು ಮಾರ್ಗ ಮಂಜೂರಾತಿ
- ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗಕ್ಕೆ ಮಂಜೂರಾತಿ
- ಶಿವಮೂಗ-ಬೀರೂರು ಡಬ್ಲಿಂಗ್ ಕಾಮಗಾರಿ
- ಕೋಟೆಗಂಗೂರು ಕೋಚಿಂಗ್ ಡಿಪೋ ಮತ್ತು ಟರ್ಮಿನಲ್ ಸ್ಟೇಷನ್
- ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ
- ಭದ್ರಾವತಿ ರೈಲು ನಿಲ್ದಾಣದ ಅಭಿವೃದ್ಧಿ
- ಶಿವಮೊಗ್ಗ-ರೇಣಿಗುಂಟಾ-ಚೆನ್ನೈ ಎರಡು ವಾರಕ್ಕೊಮ್ಮೆ ವಿಶೇಷ ರೈಲು ಮರುಸ್ಥಾಪನೆ
- ರೈಲು ಸಂಖ್ಯೆ 16581/16582 ರ ದೈನಂದಿನ ರೈಲಿಗೆ ವಿಸ್ತರಣೆ
- ಹಾರನನಳ್ಳಿ ರೈಲು ನಿಲ್ದಾಣದಲ್ಲಿ ರೈಲು 16227/16228 ನಿಲುಗಡೆ
- ಬೈಂದೂರಿನ ಮೂಕಾಬಿಕಾ ರೈಲು ನಿಲ್ದಾಣದಲ್ಲಿ ರೈಲುಗಳ ನಿಲುಗಡೆ
- ಉಡುಪಿ ಜಿಲ್ಲೆ ಸೇನಾಪುರ ರೈಲು ನಿಲ್ದಾಣದಲ್ಲಿ ರೈಲುಗಳ ನಿಲುಗಡೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post