ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕೋಟ್ಯಂತರ ರೂ. ಹಣ ಪತ್ತೆಯಾಗುತ್ತಲೇ ಇದೆ.
ತೀರ್ಥಹಳ್ಳಿ ರಸ್ತೆಯ ಹರಕೆರೆ ಚೆಕ್ ಪೋಸ್ಟ್’ನಲ್ಲಿ ಬೊಲೆರೋ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 1.39 ಕೋಟಿ ರೂ. ಹಣ ಪತ್ತೆಯಾಗಿದ್ದು, ಇದನ್ನು ವಶಕ್ಕೆ ಪಡೆಯಲಾಗಿದೆ.
ಪತ್ತೆಯಾದ ದೊಡ್ಡ ಮೊತ್ತದ ಹಣಕ್ಕೆ ದಾಖಲೆಗಳು ಇಲ್ಲದ ಕಾರಣ ವಾಹನ ಹಾಗೂ ಹಣವನ್ನು ವಶಕ್ಕೆ ಪಡೆದು ತುಂಗಾ ನಗರ ಠಾಣೆಯಲ್ಲಿ ಇರಿಸಲಾಗಿದೆ.
ಇದೇ ವೇಳೆ ಗಾಜನೂರಿನ ಚೆಕ್ ಪೋಸ್ಟ್’ನಲ್ಲಿಯೂ 4 ಲಕ್ಷ ರೂ. ಪತ್ತೆಯಾಗಿದೆ.
ತೀರ್ಥಹಳ್ಳಿ ತಾಲೂಕಿನ ಬೇಗುವಳ್ಳಿ ನಿವಾಸಿ ಮುನ್ನಸಿಫ್ ಕಾರಿನಲ್ಲಿ ದಾಖಲೆಯಿಲ್ಲದೇ 4 ಲಕ್ಷ ರೂ. ಹಣ ತೆಗೆದುಕೊಂಡು ಬರುತ್ತಿದ್ದ ವೇಳೆ ಗಾಜನೂರಿನ ಚೆಕ್ ಪೋಸ್ಟ್’ನಲ್ಲಿ ತುಂಗನಗರ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ಹಣಕ್ಕೆ ದಾಖಲೆ ಇಲ್ಲದ ಕಾರಣ ವಶಕ್ಕೆ ಪಡದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post