ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ನಾವು ಶ್ರಮಿಸುತ್ತಿದ್ದು, ಎಲ್ಲರೂ ಸೌಹಾರ್ದಯುತವಾಗಿ ಬಾಳಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಅಭಿಪ್ರಾಯಪಟ್ಟರು.
ತಾಲೂಕಿನ ಗೋಣೀಬೀಡು ಶ್ರೀ ವೀರಭದ್ರೇಶ್ವರ ದೇವಾಲಯದ ಸಮುದಾಯ ಭವನ ಸೇರಿದಂತೆ ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಸರ್ವ ಜನಾಂಗವು ನೆಮ್ಮದಿಯ ಜೀವನ ಸಾಗಿಸಬೇಕು, ಜನರು ಹರಿದು ಹಂಚಿಹೋಗದಂತೆ ಒಂದೆಡೆ ಕಲೆತು ಬೆರೆತು ಸಂಗಮಗೊಂಡು ಸೌಹಾರ್ದತೆಯಿಂದ ಬಾಳಬೇಕು ಎಂಬುದು ನಮ್ಮ ಆಶಯ. ಹೀಗಾಗಿ, ಸಣ್ಣ ಪುಟ್ಟ ಸಮಾಜಗಳನ್ನು ಗುರುತಿಸಿ ಸಮುದಾಯ ಭವನಗಳಿಗೆ ಕೋಟ್ಯಾಂತರ ರೂಗಳ ಅನುದಾನ ನೀಡಲಾಗಿದೆ ಎಂದಿದ್ದಾರೆ.
ಕ್ಷೇತ್ರದಲ್ಲಿ ಕಳೆದೊಂದು ವಾರದಲ್ಲಿ ಹತ್ತಾರು ಸಮುದಾಯಗಳ ದೇವಾಲಯಗಳ ಅಭಿವೃದ್ದಿಗಾಗಿ ಸಮುದಾಯ ಭವನಗಳು ನಿರ್ಮಿಸಲು ಶಂಕು ಸ್ಥಾಪನೆ ಮಾಡಲಾಗಿದ್ದು, ಗುಣಮಟ್ಟದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಎಲ್ಲಾ ದೇವಾಲಯಗಳ ಸಮಿತಿ ಮುಖಂಡರು ತುಂಬು ಹೃದಯದಿಂದ ಆಶೀರ್ವದಿಸಿದ್ದಾರೆ. ಕ್ಷೇತ್ರದಲ್ಲಿ ಹಿಂದೆಂದೂ ಕಂಡರಿಯದಂತಹ ಅಭಿವೃದ್ದಿ ಕಾರ್ಯಕ್ರಮಗಳು ಶೇ 80 ರಷ್ಟುನ್ನು ಮಾಡಿ ಸಾಧಿಸಿದ್ದೇವೆ. ಮತ್ತಷ್ಟು ಮಾಡುವ ಕೆಲಸಗಳು ಬಾಕಿಯಿದೆ. ನಾವು ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿದ್ದರೂ ಸಹ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರು ನಮ್ಮಲ್ಲಿ ಬೇಧ ಮಾಡಿಲ್ಲ ಹಾಗೂ ಅನುದಾನಗಳಿಗೆ ಅಡ್ಡಿಪಡಿಸಿಲ್ಲ. ಧಾರಾಳವಾಗಿ ಅನುದಾನಗಳು ನೀಡಿರುವುದರಿಂದ ಕ್ಷೇತ್ರದಲ್ಲಿ ಸುಮಾರು 150 ಕೋಟಿ ರೂ.ಗಳಿಗೂ ಅಧಿಕ ಅಭಿವೃದ್ದಿ ಮತ್ತು ಸಮುದಾಯ ಭವನಗಳ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಯಾವ್ಯಾವ ಕಾಮಗಾರಿಗೆ ಶಂಕುಸ್ಥಾಪನೆ?
- ಗೋಣೀಬೀಡು ಶ್ರೀ ವೀರಭದ್ರೇಶ್ವರ ದೇವಾಲಯದ ಸಮುದಾಯ ಭವನಕ್ಕೆ 15 ಲಕ್ಷ ರೂ.
- ನೆಲ್ಲಿಸರ ಶ್ರೀಮಾರಿಯಮ್ಮ ದೇವಾಲಯದ ಸಮುದಾಯ ಭವನಕ್ಕೆ 15 ಲಕ್ಷ ರೂ.
- ಮಾಳೇನಹಳ್ಳಿ ಶ್ರೀ ಈಶ್ವರ ದೇವಾಲಯದ ಸಮುದಾಯ ಭವನಕ್ಕೆ 15 ಲಕ್ಷ ರೂ.
- ತಾವರಘಟ್ಟ ಶ್ರೀ ಗಣಪತಿ ದೇವಾಲಯದ ಸಮುದಾಯ ಭವನಕ್ಕೆ 15 ಲಕ್ಷ ರೂ.
- ನೆಲ್ಲಿಸರದ ಶ್ರೀ ಬಸವೇಶ್ವರ ದೇವಾಲಯದ ಸಮುದಾಯ ಭವನಕ್ಕೆ 15 ಲಕ್ಷ ರೂ.
- ಹುಣಸೇಕಟ್ಟೆ ಸಿದ್ದೇಶ್ವರ ಸ್ವಾಮಿ ದೇವಾಲಯದ, ಹೊನ್ನಹಟ್ಟಿ ಹೊಸೂರು ದುರ್ಗಾಪರಮೇಶ್ವರಿ ದೇವಾಲಯ, ಕಂಬದಾಳು ಹೊಸೂರು ದುರ್ಗಾ
- ಪರಮೇಶ್ವರಿ ದೇವಾಲಯಗಳ ಸಮುದಾಯ ಭವನಗಳಿಗೆ ತಲಾ 15 ಲಕ್ಷ ರೂ.
- ಬಿಆರ್‌ಪಿ ರಾಜರಾಜೇಶ್ವರಿ ಸಮುದಾಯ ಭವನಕ್ಕೆ 20 ಲಕ್ಷ ರೂ.
- ಗ್ಯಾರೇಜ್ ಕ್ಯಾಂಪ್ ಮುತ್ತು ಮಾರಿಯಮ್ಮ ಸಮುದಾಯ ಭವನಕ್ಕೆ 20 ಲಕ್ಷ ರೂ.









Discussion about this post