ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಬಜರಂಗದಳದ ಕಾರ್ಯಕರ್ತರು ಆರ್ಥಿಕವಾಗಿ ಬಡತನವಿದ್ದರೂ ದೇಶಪ್ರೇಮ ಮತ್ತು ದೇಶ ರಕ್ಷಣೆ ವಿಷಯದಲ್ಲಿ ಶ್ರೀಮಂತಿಕೆಯ ಮನೋಭಾವವನ್ನು ಹೊಂದಿರುವವರಗಿದ್ದಾರೆ ಎಂದು ಬಜರಂಗದಳದ ಜಿಲ್ಲಾ ಸಂಚಾಲಕ ಸುನೀಲ್ ಕುಮಾರ್ ಹೇಳಿದರು.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸ್ಥಾಪನಾ ದಿನದ ಪ್ರಯುಕ್ತ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಹಣ್ಣು ವಿತರಿಸಿ ಅವರು ಮಾತನಾಡಿದರು.
ಹಿಂದೂ ಧರ್ಮ ಮತ್ತು ದೇಶದ ರಕ್ಷಣೆ ವಿಷಯ ಬಂದಾಗ ಎದೆಯುಬ್ಬಿಸಿನಿಲ್ಲುವ ಬಜರಂಗದಳದ ಕಾರ್ಯಕರ್ತರಿಗೆ ಬರಲಿರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡುವ ಶಕ್ತಿಯನ್ನು ಭಗವಂತ ನೀಡಲಿ ಎಂದರು.
ಬಜರಂಗದಳದ ತಾಲೂಕು ಸಂಚಾಲಕ ವಡಿವೇಲು ಮಾತನಾಡಿ, ಬಡತನವಿದ್ದರೂ ಸಹ ಹಿಂದೂ ಧರ್ಮದ ಯಾವುದೇ ಒಬ್ಬ ಯುವಕನೂ ಉಗ್ರಗಾಮಿಯಾಗುವುದಿಲ್ಲ, ಬದಲಿಗೆ ದೇಶಭಕ್ತನಾಗಿರುತ್ತಾನೆ ಎಂದರು.
ಕಾಯಕ್ರಮದಲ್ಲಿ ಬಜರಂಗದಳದ ನಗರ ಸಹಸಂಯೋಜಕ ಕಿರಣ್, ರಂಗಣ್ಣ, ಕೃಷ್ಣ, ತಾಲೂಕು ಗ್ರಾಮಾಂತರ ಸಂಚಾಲಕ ವಾಗೀಶ್, ಸೇರಿದಂತೆ ಅನೇಕ ಕಾಯಕರ್ತರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post