ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಗರದಲ್ಲಿ ನಿನ್ನೆ ಭಾರೀ ಮಳೆ ಸುರಿದ ಬೆನ್ನಲ್ಲೇ ಇಂದು ಸಂಜೆಯೂ ಸಹ ಅಪಾರ ಪ್ರಮಾಣದಲ್ಲಿ ವರುಣ ಅಬ್ಬರಿಸಿದ್ದಾನೆ.
ಇಂದು ಸಂಜೆ 7.30ರ ವೇಳೆಗೆ ಆರಂಭವಾದ ಮಳೆ 9.30ರವರೆಗೂ ಭಾರೀ ಪ್ರಮಾಣದಲ್ಲಿ ಸುರಿದಿದ್ದು, ವರುಣನ ರಭಸ ಹೆಚ್ಚಾಗಿತ್ತು.
ಮಳೆಯ ರಭಸ ಹೆಚ್ಚಾಗಿದ್ದ ಪರಿಣಾಮ ನಾಲ್ಕು ಚಕ್ರದ ವಾಹನಗಳೂ ಸಹ ಸಂಚರಿಸುವುದು ಕಷ್ಟವಾಗಿತ್ತು. ಒಂದೂವರೆ ಗಂಟೆಗೂ ಹೆಚ್ಚು ಕಾಲ ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಬಸ್ ನಿಲ್ದಾಣ, ಮಾಧವಾಚಾರ್ ವೃತ್ತದ ಬಳಿಕೆ ಕೆಲವು ಪ್ರದೇಶ ಸೇರಿದಂತೆ ಹಲವೆಡೆ ಅರ್ಧ ಅಡಿಗಳಷ್ಟು ನೀರು ಹರಿಯತ್ತಿತ್ತು. ಹಲವೆಡೆ ಚರಂಡಿಗಳು ತುಂಬಿ ರಸ್ತೆ ನೀರು ಹರಿಯುತ್ತಿತ್ತು.
ಇನ್ನು, ಹಳೇನಗರದ ಎನ್’ಎಸ್’ಟಿ ರಸ್ತೆಯಲ್ಲಿ ಮಳೆಯ ಅಬ್ಬರಕ್ಕೆ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಸಿದೆ. ಮಳೆ ನೀರಿನ ರಭಸ ಹೆಚ್ಚಾಗಿದ್ದ ಕಾರಣ, ಚರಂಡಿಗಳು ತುಂಬಿದ ಕಾರಣ ನೀರು ಮನೆಗಳಿಗೆ ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಯಿತು. ಬಸವೇಶ್ವರ ವೃತ್ತದ ಬಳಿಯಲ್ಲಿ ಎರಡೂ ಅಡಿಗೂ ಹೆಚ್ಚು ನೀರು ಹರಿದಿದ್ದು, ಪರಿಣಾಮವಾಗಿ ಹಲವು ಅಂಗಡಿಗಳಿಗೂ ನೀರು ನುಗ್ಗಿದೆ.
ತತಕ್ಷಣವೇ ವಿಷಯ ತಿಳಿದ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿಗಳು ನೀರು ಹೊರ ಹಾಕುವ ಎರಡು ವಾಹನಗಳ ಮೂಲಕ ಮನೆಗಳಿಂದ ನೀರನ್ನು ಹೊರಕ್ಕೆ ಹಾಕುವ ಕಾರ್ಯ ಆರಂಭಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















