ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಸಿದ್ದಾರೂಢ ನಗರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪಕ್ಕದಲ್ಲಿ ಸಂಕರ್ಷಣ ಧರ್ಮ ಸಂಸ್ಥೆ ವತಿಯಿಂದ ನಿರ್ಮಿಸುತ್ತಿರುವ ವೆಂಕಟೇಶ್ವರ ದೇವಾಲಯದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಕೆ. ಸಂಗಮೇಶ್ವರ್ ಇಂದು ಗುದ್ದಲಿ ಪೂಜೆ ನೆರವೇರಿಸಿದರು.
ಶ್ರೀಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಬ್ರಹ್ಮ ಶ್ರೀ ಗೋಪಾಲಕೃಷ್ಣಾಚಾರ್ ಅವರು ಧಾರ್ಮಿಕ ಪೂಜಾವಿಧಿಗಳನ್ನು ನಡೆಸಿದರು. ಆನಂತರ ಶಾಸಕ ಸಂಗೇಶ್ವರ್ ಗುದ್ದಲಿ ಪೂಜೆ ನಡೆಸುವ ಮೂಲಕ ಕಾಮಗಾರಿಗೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ವಾಸುದೇವ ಮೂರ್ತಿ, ಪ್ರಮುಖರಾದ ರಾಘವೇಂದ್ರ, ರಮಾಕಾಂತ್, ಮಧುಸೂಧನ, ಕೇಶವಮೂರ್ತಿ, ಪರಷುರಾಮ್, ಶಾಸಕರ ಪುತ್ರ ಗಣೇಶ್ ಇದ್ದರು.
ವೆಂಕಟೇಶ್ವರ ದೇವಾಲಯದ ಮೇಲ್ಬಾಗದಲ್ಲಿ ಸಮುದಾಯ ಭವನಕ್ಕೆ ಸಂಸದರ ನಿಧಿಯಿಂದ 25 ಲಕ್ಷ ರೂ.ಗಳ ಅನುದಾನ ನೀಡಲಾಗಿದೆ.
ಇನ್ನು, ಭದ್ರಾವತಿ ತಾಲೂಕು ಬ್ರಾಹ್ಮಣ ಮಹಾಸಭಾದ ಗಾಯತ್ರಿ ಸಭಾಭವನದ 15 ಲಕ್ಷ ರೂ. ವೆಚ್ಚದ ಕಾಮಗಾರಿಗೂ ಸಹ ಶಾಸಕ ಬಿ.ಕೆ. ಸಂಗಮೇಶ್ವರ್ ಶಂಕುಸ್ಥಾನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಬ್ರಾಹ್ಮಣ ಸಮಾಜದ ಮುಖಂಡರು ನನ್ನನ್ನು ಎಂದಿಗೂ ಕೈಬಿಟ್ಟಿಲ್ಲ. ಹೀಗಾಗಿ, ನಾನೂ ಸಹ ಎಂದಿಗೂ ಬ್ರಾಹ್ಮಣ ಸಮಾಜದ ಕೈ ಬಿಡುವುದಿಲ್ಲ. ನನ್ನನ್ನು ತಮ್ಮ ಸಮಾಜದ ಬಂಧು ಎಂದು ಭಾವಿಸಿಕೊಳ್ಳಿ. ಬ್ರಾಹ್ಮಣರ ಅಭಿವೃದ್ಧಿಗೆ ನಾವು ಎಂದಿಗೂ ಬದ್ದವಾಗಿದ್ದೇನೆ. ಸಮಾಜದ ಹಿತಕ್ಕಾಗಿ ಏನೆಲ್ಲಾ ಸಹಾಯವಾಗಬೇಕು ಎಂಬುದನ್ನು ತಿಳಿಸಿದಲ್ಲಿ ಅದನ್ನು ಮಾಡಿಕೊಡಲು ನಾನು ಸಿದ್ದನಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜನಾರ್ಧನ ಅಯ್ಯಂಗಾರ್, ರಮಾಕಾಂತ್, ನರಸಿಂಹಾಚಾರ್, ಕೇಶವ, ಮಂಜುನಾಥ್, ಸದಸ್ಯರುಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post