ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸ್ಥಗಿತಗೊಂಡಿರುವ ಮೈಸೂರು ಪೇಪರ್ ಮಿಲ್(ಎಂಪಿಎಂ) ಕಾರ್ಖಾನೆಯನ್ನು ಪುನಾರಂಭಿಸಲಿದ್ದು, ಕಾರ್ಖಾನೆ ನಿರ್ವಹಣೆಗೆ ಮೂರು ಖಾಸಗಿ ಸಂಸ್ಥೆಗಳು ಆಸಕ್ತಿ ತೋರಿಸಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎಂಪಿಎಂ ಕಾರ್ಖಾನೆಯ ಇತಿಹಾಸ ಹಾಗೂ ನೌಕರರ ಹಿತರಕ್ಷಿಸುವ ಉದ್ದೇಶದಿಂದ, ಸ್ಥಗಿತವಾಗಿರುವ ಕಾರ್ಖಾನೆಯ ಕಾರ್ಯಾಚರಣೆ, ನಿರ್ವಹಣೆ ಸುಗಮವಾಗಿ ನಡೆಸಲು, ಸರ್ಕಾರವು 30 ವರ್ಷಗಳ ಅವಧಿಗೆ ಗುತ್ತಿಗೆ, ಪುನರ್ವಸತಿ, ಕಾರ್ಯಾಚರಣೆ, ನಿರ್ವಹಣೆ ಮತ್ತು ವರ್ಗಾವಣೆ ಆಧಾರದಲ್ಲಿ ಆಯ್ಕೆಯಾದ ಖಾಸಗಿ ಕಂಪನಿಗೆ ನೀಡಲು ನಿರ್ಧರಿಸಿದ್ದು, ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾರ್ಖಾನೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲು ಟೆಂಡರ್ ಆಹ್ವಾನಿಸಲಾಗಿದ್ದು, ಟೆಂಡರ್ ಪೂರ್ವ ಸಭೆ ನಡೆಸಲಾಗಿದ್ದು, 3 ಸಂಸ್ಥೆಗಳು ಮುಂದೆ ಬಂದಿದ್ದು, ಟೆಂಡರ್ ಪ್ರಕ್ರಿಯೆನ್ನು ಅಂತಿಮಗೊಳಿಸಲು ಸಿದ್ದತೆಗಳು ನಡೆದಿವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news






Discussion about this post