ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ರೌಡಿ ಶೀಟರ್ ಶಾರುಖ್ ಕೊಲೆ ಪ್ರಕರಣದ ಆರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಹನುಮಂತನಗರದ ರಮೇಶ್ (44), ಅದೇ ಬಡಾವಣೆಯ ವೆಂಕಟೇಶ್ (35), ಚಂದ್ರ (37), ಸತ್ಯಸಾಯಿನಗರದ ಮಾರಿಯಮ್ಮ ಬೀದಿಯ ನಿವಾಸಿಗಳಾದ ಕಾರ್ತಿಕ್ (24) ಹಾಗೂ ಮಧುಸೂಧನ್ (28) ಎಂದು ಗುರುತಿಸಲಾಗಿದ್ದು, ಇನ್ನೊಬ್ಬನ ಮಾಹಿತಿ ತಿಳಿದುಬಂದಿಲ್ಲ.
ರೌಡಿ ಶೀಟರ್ ಶಾರೂಖ್ ಖಾನ್’ನನ್ನು ಸೆ.30ರಂದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಕುರಿತಂತೆ ಆತನ ತಂದೆ ದೂರನ್ನೂ ಸಹ ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಎಸ್’ಪಿ ಶಾಂತರಾಜು, ಎಎಸ್’ಪಿ ಡಾ.ಎಚ್.ಟಿ. ಶೇಖರ್ ಹಾಗೂ ಡಿವೈಎಸ್’ಪಿ ಸುಧಾಕರ ನಾಯ್ಕ ಅವರ ಮಾರ್ಗದರ್ಶನದಲ್ಲಿ ಭದ್ರಾವತಿ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಂಡಿಕೆ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಗಿತ್ತು. ಈ ತಂಡದಲ್ಲಿ ಹೊಸಮನೆ ಪಿಎಸ್‌ಐ ಜಯಪ್ಪ, ಸಿಬ್ಬಂದಿಗಳಾದ ವೆಂಕಟೇಶ್, ಕುಮಾರ್, ಮಂಜುನಾಥ್, ಮಖ್ಸೂದ್ ಖಾನ್, ಸಂತೋಷ್ ಕುಮಾರ್, ಅಂಬರೀಶ್, ನವೀನ್ ಕುಮಾರ್, ಪ್ರಸನ್ನ ಸ್ವಾಮಿ, ಸುನೀಲ್ ಕುಮಾರ್, ಮಧುಸೂಧನ್ ಮಹಿಳಾ ಸಿಬ್ಬಂದಿಗಳಾದ ವಿಶಾಲಾಕ್ಷಿ, ವಿಜಯಕಲಾ ಅವರುಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post