ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕರ್ನಾಟಕ ನೀರಾವರಿ ನಿಗಮದ ಬಿಆರ್‌ಎಲ್‌ಬಿಸಿ 4 ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಗೂಲಿ ಹಾಗೂ ಗುತ್ತಿಗೆ ನೌಕರರು ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಒಟ್ಟು 4 ವಿಭಾಗಗಳಲ್ಲಿ ಸುಮಾರು 500 ಮಂದಿ ದಿನಗೂಲಿ ಹಾಗು ಗುತ್ತಿಗೆ ನೌಕರರ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಹಿಂದಿನ ಗುತ್ತಿಗೆದಾರ 2 ತಿಂಗಳ ವೇತನ ನೀಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟ ನಡೆಸಿದ ಪರಿಣಾಮ ಹೊಸ ಗುತ್ತಿಗೆ ನೇಮಕಮಾಡಲಾಗಿದೆ. ಹೊಸ ಗುತ್ತಿಗೆದಾರ ಇಎಸ್‌ಐ, ಪಿಎಫ್ ಕಂತು ಹಾಗು ವೇತನ ವ್ಯತ್ಯಸದ ಹಣ ತುಂಬಿಕೊಟ್ಟಿಲ್ಲ. ಇದರಿಂದಾಗಿ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅಳಲು ವ್ಯಕ್ತಪಡಿಸಿದರು.
ಗುತ್ತಿಗೆದಾರ ರಾಜಣ್ಣ ತಕ್ಷಣ 2 ತಿಂಗಳ ವೇತನ ನೀಡಬೇಕು. ಹೊಸ ಗುತ್ತಿಗೆದಾರ ಇಎಸ್‌ಐ, ಪಿಎಫ್ ಹಣ ತುಂಬಿಕೊಡಬೇಕೆಂದು ಆಗ್ರಹಿಸಿದರು.
ದಿನಗೂಲಿ ಹಾಗೂ ಗುತ್ತಿಗೆ ನೌಕರರ ಮನವಿ ಆಲಿಸಿದ ಕಾರ್ಯಪಾಲಕ ಇಂಜಿನಿಯರ್ ರವಿಚಂದ್ರನ್ ತಕ್ಷಣ ಗುತ್ತಿಗೆದಾರರನ್ನು ಕರೆಸಿ ಸಮಸ್ಯೆ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು.
ನೀರಾವರಿ ಇಲಾಖೆ ದಿನಗೂಲಿ ಹಾಗು ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಹರೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ಪ್ರಕಾಶ್, ಕುಮಾರ್, ಕರಿಬಸಪ್ಪ, ಬೊಮ್ಮನಕಟ್ಟೆ ಪ್ರಕಾಶ್, ದೇವೇಂದ್ರಪ್ಪ, ಅಸ್ಮಬಾನು, ಮೇರಿ, ಶೋಭಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















