ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ದೇಶದ ಸ್ವಾತಂತ್ರಕ್ಕಾಗಿ ಚಿಕ್ಕ ವಯೋಮಾನದಲ್ಲೇ ತಮ್ಮ ಪ್ರಾಣತ್ಯಾಗ ಮಾಡಿದ ಹುತಾತ್ಮ ಭಗತ್ ಸಿಂಗ್ ಇಂದಿನ ಯುವಕರಿಗೆ ಸ್ಪೂರ್ತಿಯಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರ ಪ್ರಮುಖ್ ಮಧುಕರ್ ಹೇಳಿದರು.
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವೀರ ಭಗತ್ ಸಿಂಗ್ ರವರ 113ನೆಯ ಜನುಮದಿನದ ಹಿನ್ನೆಲೆಯಲ್ಲಿ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್’ಪಿಬಿ ನೆನೆದು ಕಣ್ಣೀರು ಹಾಕಿದ ಎಸ್. ಜಾನಕಿ ಹೇಳಿದ್ದೇನು?
ವಿಎಚ್’ಪಿ ನಗರಾಧ್ಯಕ್ಷ ಸತೀಶ್ ಮುಂಚೆ ಮನೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ವಿಎಚ್’ಪಿ ಜಿಲ್ಲಾಧ್ಯಕ್ಷ ರಮೇಶ್ ಬಾಬು ಜಾಧವ್, ವಿಎಚ್’ಪಿ ನಗರ ಗೌರವಾಧ್ಯಕ್ಷ ವಿನೋದ್ ಕುಮಾರ್ ಜೈನ್, ಕಾರ್ಯದರ್ಶಿ ಎಸ್.ಆರ್. ಸುಧಾಕರ್, ಬಜರಂಗದಳ ನಗರ ಸಂಚಾಲಕ ಅಂಕುಶ್, ಶಿವಮೊಗ್ಗ ನಗರ ಮಾತೃಶಕ್ತಿ ಪ್ರಮುಖ್ ನಾಗರತ್ನಮ್ಮ, ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳ ಅಪಾರ ಕಾರ್ಯಕರ್ತರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news






Discussion about this post