ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಕ್ಕಳಿಗೆ ಹಲ್ಲಿನ ಆರೋಗ್ಯ ಅತ್ಯಂತ ಮುಖ್ಯವಾಗಿದ್ದು, ಪ್ರತಿನಿತ್ಯ ಬ್ರಷ್ ಮಾಡುವ ಜೊತೆಯಲ್ಲಿ ಹಲ್ಲಿನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಸುಬ್ಬಯ್ಯ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ಸುರೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಕ್ಕಳ ದಿನಾಚರಣೆಯ ಅಂಗವಾಗಿ ಗುರುಪುರ ಸರ್ಕಾರ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಡ್ರಾಯಿಂಗ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೀವು ಬ್ರಷ್ ಮಾಡುವಾಗ ಹಲ್ಲಿನ ಮುಂಭಾಗ ಮಾತ್ರವಲ್ಲ ಹಿಂಭಾಗ, ಕೆಳ ಹಾಗೂ ಮೇಲ್ಬಾಗವೂ ಸಹ ಸ್ವಚ್ಛವಾಗುತ್ತಿದೆಯೇ ಎಂದು ಗಮನಿಸಿಕೊಳ್ಳಬೇಕು. ವೃತ್ತಾಕಾರದಲ್ಲಿ ಬ್ರಷ್ ಮಾಡುವುದರಿಂದ ಎಲ್ಲ ಹಲ್ಲುಗಳೂ ಸಹ ಸ್ವಚ್ಛಗೊಳ್ಳುತ್ತವೆ. ಬ್ರಷ್ ಎರಡೂ ಕಡೆಯಿಂದ ಬಾಯಿಯ ಕೊನೆಯ ಹಲ್ಲಿಗೆ ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಿ ಎಂದರು ಸಲಹೆ ನೀಡಿದರು.
ಮಕ್ಕಳಿಗೆ ಸುಮಾರು 5 ವರ್ಷ ಆಗುವವರೆಗೂ ಅವರಿಗೆ ಬ್ರಷ್ ಮಾಡುವಲ್ಲಿ ಪೋಷಕರು ಗಮನಿಸಬೇಕು. ಹೆಚ್ಚಿನ ಪ್ರಮಾಣದ ಫ್ಲೋರೈಡ್ ಅನ್ನು ನುಂಗುವುದನ್ನು ತಪ್ಪಿಸಲು ಹೆಚ್ಚುವರಿ ಟೂತ್ ಪೇಸ್ಟ್ ಅನ್ನು ಉಗುಳಲು ಮಕ್ಕಳಿಗೆ ಪೋಷಕರು ಕಲಿಸಬೇಕು. ಸ್ವಲ್ಪ ಟೂತ್ ಪೇಸ್ಟ್ ಬಾಯಿಯಲ್ಲಿ ಬಿಟ್ಟರೆ ಹಲ್ಲುಗಳಿಗೆ ಒಳ್ಳೆಯದು. ಇದಕ್ಕೆ ಕಾರಣ ದಿ ಫ್ಲೋರೈಡ್ ಟೂತ್ ಪೇಸ್ಟ್ ಹಲ್ಲಿನ ಪ್ಲೋರಾಪಟೈಟ್ ಸ್ಫಟಿಕಗಳೊಂದಿಗೆ ಪ್ರತಿಕ್ರಿಯಿಸಲು ಸಾಕಷ್ಟು ಸಮಯ ಸಿಗುತ್ತದೆ. ಅದು ನಿಮ್ಮ ಮಗುವಿನ ಹಲ್ಲುಗಳನ್ನು ಇನ್ನಷ್ಟು ಬಲಗೊಳಿಸುತ್ತದೆ ಎಂದರು.
ಮಕ್ಕಳ ದಿನಾಚರಣೆಯ ಅಂಗವಾಗಿ ಗುರುಪುರ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಡಾ. ವಿಜಯ್ ಅಮರನಾಥ್, ಡಾ.ಹೃದಯಾ, ಡಾ. ಜುರೈಜ್, ಇಂಟರ್ನ್ಸ್ ಹಾಗೂ ವಿದ್ಯಾರ್ಥಿಗಳು, ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post