ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಆಯನೂರು ನಡುವಿನ ಡಾಂಬರ್ ಫ್ಯಾಕ್ಟರಿ ಸನಿಹವಿರುವ ವಿಶಾಲ ಸ್ಥಳದಲ್ಲಿ ಇಂದು ಆಶ್ರಯ ಮನೆಗಳ ನಿವೇಶನಕ್ಕೆ ಭೂಮಿ ಪೂಜಾ ಸಮಾರಂಭ ನಡೆಯಿತು.
ಶಿವಮೊಗ್ಗ ಗ್ರಾಮಾಂತರ ಜನಪ್ರಿಯ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಅವರು ವಿದ್ಯುಕ್ತವಾದ ಪೂಜೆ ನೆರವೇರಿಸಿದರು.
ರಾಷ್ಟ್ರೀಯ ಹೆದ್ದಾರಿಗಳ ಮಾರ್ಗಸೂಚಿ ಸೂತ್ರಗಳ ಅನುಸಾರ ಇಲ್ಲಿನ ನಿವೇಶನಗಳನ್ನು ಯೋಜಿಸಿ, ಹೆದ್ದಾರಿ ಪಕ್ಕದಲ್ಲೇ ನಿವೇಶನಗಳಿದ್ದರೆ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಅದನ್ನು ಗಮನದಲ್ಲಿಟ್ಟುಕೊಂಡು ಅನತಿ ದೂರದಲ್ಲಿ ಮನೆಗಳನ್ನು ನಿರ್ಮಿಸಲು ನಮ್ಮ ಇಲಾಖೆಯವರು ಕಂಟ್ರಾಕ್ಟರುಗಳು ಸೂಕ್ತವಾಗಿ ಚಿಂತಿಸಬೇಕು ಎಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಗಣ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post