ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ #Shivamogga ತುಂಗಾ ಭದ್ರಾ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಸರ್ಕಾರ ಮಧ್ಯಪ್ರವೇಶ ಮಾಡಿ ಅಲ್ಲಿ ವಾಸಿಸುತ್ತಿರುವ ಜನರಿಗೆ ಮತ್ತು ಉಳುಮೆ ಮಾಡುತ್ತಿರುವ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ #BYRaghavendra ಆಗ್ರಹಿಸಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದ ತುಂಗಭದ್ರಾ #TungaBhadra ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ 1950ರಲ್ಲಿಯೇ ಕಾರ್ಖಾನೆ ಪ್ರಾರಂಭವಾಯಿತು. ನಂತರದ ದಿನಗಳಲ್ಲಿ ಚೆನ್ನೈನ #Chennai ದೇವಿ ಶುಗರ್ ಹೆಸರಲ್ಲಿ ಮುಂದುವರೆಯಿತು. 1994ರಲ್ಲಿ ಅದು ಮುಚ್ಚಿತು. ಈ ಮಧ್ಯೆ ಅನೇಕ ಘಟನೆಗಳು ನಡೆದವು ಎಂದರು.
ಸುಮಾರು 2374 ಎಕರೆ ಪ್ರದೇಶದ ಈ ಜಾಗದಲ್ಲಿ ಹಲವು ರೈತರು ಉಳುಮೆ ಮಾಡಿಕೊಂಡಿದ್ದಾರೆ. ಮನೆ ಕಟ್ಟಿಕೊಂಡು ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಕೆಲವರಿಗೆ ಸಾಗುವಳಿ ಚೀಟಿ ಕೂಡ ಸಿಕ್ಕಿದೆ. ಕೆಲವರು ಹೈಕೋರ್ಟ್ #HighCourt ಮೆಟ್ಟಿಲೇರಿದ್ದಾರೆ. ಸಕ್ರಮಕ್ಕಾಗಿ ರೈತರು ಅರ್ಜಿ ಹಾಕಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿರುವಾಗಲೇ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿ ಈ ಎಲ್ಲಾ ಜಾಗವನ್ನು ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಒಪ್ಪಿಸಿದೆ. ಈಗ ಎಲ್ಲಾ ರೈತರು, ನಿವಾಸಿಗಳು ಆತಂಕದಲ್ಲಿದ್ದಾರೆ ಎಂದರು.
ಇಂತಹ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ನ್ಯಾಯಾಲಯಕ್ಕೆ ಈಗಿರುವ ಪರಿಸ್ಥಿತಿ ಬಗ್ಗೆ ತಿಳಿಸಬೇಕು. ರೈತರ ಸಂಕಷ್ಟವನ್ನು ನ್ಯಾಯಾಲಯಕ್ಕೆ ತಿಳಿಸಿ ರೈತರಿಗೆ ನ್ಯಾಯ ಕೊಡಿಸಬೇಕು. ಮತ್ತು ಸಾವಿರಾರು ಜನರು ಅಲ್ಲಿ ವಾಸ ಮಾಡುತ್ತಿದ್ದಾರೆ. 398 ಕುಟುಂಬಗಳು ವಾಸ ಮಾಡುತ್ತಿವೆ. ಅನೇಕ ಕಡೆ ನಾಡಕಚೇರಿಗಳಿವೆ. ಈಗಾಗಲೇ ಹಲವಾರು ಗ್ರಾಮಗಳೇ ನಿರ್ಮಾಣವಾಗಿವೆ. ಸರ್ಕಾರಿ ಜಾಗವಿದೆ. ನೀರಿನ ಟ್ಯಾಂಕ್ ಗಳಿವೆ. ಈಗ ನ್ಯಾಯಲಯದ ತೀರ್ಪಿನಿಂದ ಜನ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದರು.
ಈ ಜಾಗದಲ್ಲಿ ಖಾಸಗಿ ಲೇಔಟ್ ಆಗುತ್ತಿದೆ ಎಂಬ ಸುದ್ದಿಯೂ ಇದೆ. ಇದು ಆಗಬಾರದು. ವಸತಿ ಪ್ರದೇಶವನ್ನು ಮತ್ತು ರೈತರ ಉಳುಮೆ ಜಾಗವನ್ನು ಮಾಲೀಕರಿಂದ ಸರ್ಕಾರವೇ ಬಿಡಿಸಿಕೊಂಡು ರೈತರಿಗೆ ನೀಡಬೇಕು. ಸರ್ಕಾರ ಯಾವುದೇ ಭೂಮಾಫಿಯಾದ ಒತ್ತಡಗಳಿಗೆ ಮಣಿಯಬಾರದು. ರೈತರ ಆತಂಕ ದೂರ ಮಾಡಬೇಕು ಎಂದರು.
ಆ ದೇವರು ನೋಡಿಕೊಳ್ಳುತ್ತಾನೆ…
ಸಕ್ಕರೆ ಕಾರ್ಖಾನೆ #SugarFactory ಜಾಗಕ್ಕೆ ಸಂಬಂಧಿಸಿದಂತೆ ಕೆಲವರು ಆರೋಪ ಮಾಡುತ್ತಿದ್ದಾರೆ. ನಿಮ್ಮ ಹೆಸರನ್ನು ಮಧ್ಯ ತರುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಸಂಸದ ರಾಘವೇಂದ್ರ, ಆ ಜಾಗಕ್ಕೆ ಸಂಬಂಧಿಸಿದಂತೆ ಒಂದು ಅಡಿಯೂ ನನಗೆ ಬೇಕಾಗಿಲ್ಲ. ಕೆಲವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯ ಗುರಿಯೇ ಆ ಜಾಗವನ್ನು ರೈತರಿಗೆ ಮರಳಿ ಕೊಡಿಸಬೇಕು ಎಂಬುದಾಗಿದೆ. ಅಲ್ಲಿ ಯಾರು ಲೇಔಟ್ ಮಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಕೆಲವರು ಆರೋಪ ಮಾಡುವಂತೆ ನಿಜವೇ ಆಗಿದ್ದರೆ ಆ ದೇವರು ನೋಡಿಕೊಳ್ಳುತ್ತಾನೆ. ನನ್ನ ಮೇಲೆ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಟಿ.ಡಿ. ಮೇಘರಾಜ್, ಗಿರೀಶ್ ಪಟೇಲ್, ಎಸ್. ದತ್ತಾತ್ರಿ, ಶಿವರಾಜ್, ಕೆ.ಬಿ. ಅಶೋಕ್ ನಾಯ್ಕ್, ಜಗದೀಶ್, ಹೃಷಿಕೇಶ್ ಪೈ, ರತ್ನಾಕರ ಶೆಣೈ, ರಮೇಶ್, ವಿನ್ಸೆಂಟ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post