ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಬೇರೆ ಊರುಗಳಿಂದ ನಗರಕ್ಕೆ ಕೆಲಸ ಹುಡುಕಿಕೊಂಡು ಬಂದ ಅಲೆಮಾರಿ ಜೀವನ ಸಾಗಿಸುತ್ತಿರುವ ಜನರಿಗೆ ದೀಪಾವಳಿ ಹಬ್ಬದ ಅಂಗವಾಗಿ ಜೀವಾಮೃತ ಟ್ರಸ್ಟ್ ವತಿಯಿಂದ ಸಿಹಿ ಹಂಚಿ, ಬೆಡ್ ಶೀಟ್ ವಿತರಣೆ ಮಾಡಲಾಯಿತು.
ಕೊರೋನಾ ನಡುವೆಯೂ ಸಹ ನಾಡಿನಾದ್ಯಂತ ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಲಾಯಿತು. ಇಂತಹ ಸಂದರ್ಭದಲ್ಲಿ ಬೇರೆ ಊರುಗಳಿಂದ ನಗರದಲ್ಲಿ ರಸ್ತೆ, ಚರಂಡಿ ಕಾಮಗಾರಿ ಕೆಲಸ ಮಾಡುವ ಕಾರ್ಮಿಕರಿಗೆ ಟ್ರಸ್ಟ್ ವತಿಯಿಂದ ಸಿಹಿ ಹಂಚಿ, ಶುಭ ಕೋರಿ, ಬೆಡ್ ಶೀಟ್’ಗಳನ್ನು ವಿತರಣೆ ಮಾಡಲಾಯಿತು.
ಇವರಿಗೆ ಏನೇ ಕಷ್ಟಗಳು ಎದುರಾದರೂ ಟ್ರಸ್ಟ್ ವತಿಯಿಂದ ಸಹಾಯ ಯಾವಾಗಲೂ ಇರುತ್ತದೆ ಎಂದು ಅವರಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಹರೀಶ್, ಉಪಾಧ್ಯಕ್ಷರು ಯತೀಶ್, ಕಾರ್ಯದರ್ಶಿ ಭಾನುಪ್ರಕಾಶ್ ಆಚಾರ್ಯ, ಖಜಾಂಶಿ ಪ್ರಮೋದ್, ಸದಸ್ಯರುಗಳಾದ ತರುಣ್, ಕೋಮಲ ಗೌಡ ಮತ್ತಿತರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post