ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವೈಯಕ್ತಿಕ ಸೇರಿದಂತೆ ಯಾವುದೇ ರೀತಿಯ ತುರ್ತು ಸಹಾಯ ಅಗತ್ಯ ಎದುರಾದರೆ ಸಾರ್ವಜನಿಕರ ಸಹಾಯನ್ನು ಇನ್ನು ಮುಂದೆ ಪೊಲೀಸ್ ಇಲಾಖೆಯ ವಿಶೇಷ ವಾಹನ ನೀವಿರುವ ಸ್ಥಳಕ್ಕೆ ಆಗಮಿಸಲಿದೆ.
ಹೌದು… ಇಂತಹುದ್ದೊಂದು 18 ವಿಶೇಷ ವಾಹನಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಅವರು ಲೋಕಾರ್ಪಣೆಗೊಳಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಈ ತುರ್ತು ಸ್ಪಂದನಾ ವಾಹನಗಳನ್ನು ನೀಡಲಾಗಿದೆ. ಸಾರ್ವಜನಿಕರು ವೈಯಕ್ತಿಕ ತುರ್ತು ಪರಿಸ್ಥಿತಿ, ಅಗ್ನಿ ಅನಾಹುತ, ಸರಗಳ್ಳತನ ಸೇರಿದಂತೆ ಯಾವುದೇ ರೀತಿಯ ತೊಂದರೆಯಲ್ಲಿದ್ದರೆ 112 ಸಂಖ್ಯೆಗೆ ಕರೆ ಮಾಡಬಹುದು. ಕರೆ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ನಮ್ಮ ವಿಶೇಷ ಪೊಲೀಸ್ ವಾಹನ ಆ ಸ್ಥಳಕ್ಕೆ ತಲುಪಲಿದೆ. ಅಲ್ಲದೇ, ಕರೆ ಮಾಡಿದವರ ಮೊಬೈಲ್’ಗೆ ಕರೆ ಸ್ವೀಕೃತಿ ಒಂದು ಸಂದೇಶವೂ ಸಹ ತಲುಪಲಿದೆ ಎಂದರು.
ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಇದರ ಕುರಿತಾಗಿ ಮಾಹಿತಿ ಇನ್ನು ಮುಂದೆ ನಿರಂತರವಾಗಿ ಪ್ರಕಟವಾಗಲಿದ್ದು, 112 ಸಂಖ್ಯೆ ವಿಶೇಷ ಆಪ್ ಸಹ ರೂಪಿಸಲಾಗಿದೆ ಎಂದರು.
ಜಿಲ್ಲೆಗೆ ಒಟ್ಟು 18 ವಾಹನಗಳು ಮಂಜೂರಾಗಿದ್ದು, ಶಿವಮೊಗ್ಗ ಉಪವಿಭಾಗಕ್ಕೆ 6, ಭದ್ರಾವತಿ, ಸಾಗರ, ಶಿಕಾರಿಪುರ ಹಾಗೂ ತೀರ್ಥಹಳ್ಳಿಗಳಿಗೆ ತಲಾ 3 ವಾಹನಗಳನ್ನು ನೀಡಲಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post