ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಶಕಗಳ ಕಾಲ ಕಾಂಗ್ರೆಸ್ ಪೋಷಿಸಿದ್ದ ದೇಶದ್ರೋಹಿ ಎಂಬ ಇಲಿಗಳನ್ನು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಎಂಬ ಹುಲಿಗಳ ಆಡಳಿತದಲ್ಲಿ ಹೊಸಕಿ ಹಾಕುತ್ತೇವೆ ಎಂದು ಮಾಜಿ ಸಚಿವ, ಶಾಸಕ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದ್ದಾರೆ.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾಳಕೊಪ್ಪದಲ್ಲಿ ಬರೆದಂತಹ ಗೋಡೆ ಬರಹಗಳನ್ನು ಬರೆಯುವವರು ಹೇಡಿಗಳು. ಯಾರೂ ಇಲ್ಲದ ಸಮಯದಲ್ಲಿ, ರಾತ್ರಿ ವೇಳೆ ಹತ್ಯೆ ಮಾಡುವವರು, ಪೊಲೀಸರ ಕಣ್ಣು ತಪ್ಪಿಸಿ ಸಮಾಜ ವಿರೋಧಿ ಹಾಗೂ ದೇಶವಿರೋಧಿ ಕೃತ್ಯಗಳನ್ನು ಎಸಗುವವರು ಹೇಡಿಗಳು ಎಂದು ಚಾಟಿ ಬೀಸಿದರು.
ಈ ದೇಶದ್ರೋಹಿಗಳಿಗೆ ದೇಶದ ಕುರಿತಾಗಿ ಕಲ್ಪನೆಯೇ ಇಲ್ಲ. ಗಲಭೆ, ಆಶಾಂತಿ ಸೃಷ್ಠಿಸುವುದು, ದೇಶದ್ರೋಹಿ ಚಟುವಟಿಕೆ ನಡೆಸುವ ಮೂಲಕ ಹಿಂದುತ್ವವನ್ನು ಅಳಿಸುವ ಸಂಚು ಇವರದ್ದಾಗಿದೆ. ಇಂತಹವರಿಗೆ ಕಾಂಗ್ರೆಸ್ ಆರಂಭದಿAದಲೂ ಬೆಂಬಲಿಸುತ್ತಲೇ ಬಂದಿತ್ತು. ಆದರೆ, ಅದು ಸಾಧ್ಯವೂ ಇಲ್ಲ ಹಾಗೂ ಇವರ ಆಟ ಬಹಳ ದಿನ ನಡೆಯುವುದೂ ಸಹ ಇಲ್ಲ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಎಂಬ ಹುಲಿಗಳ ಆಡಳಿತದಲ್ಲಿ ಇಂತಹ ದೇಶದ್ರೋಹಿಗಳನ್ನು ಹೊಸಕಿ ಹಾಕುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post