ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಬೈಪಾಸ್ ರಸ್ತೆಯಲ್ಲಿ ವಾಹನ ದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ ಈಗಿರುವ ಹೊಸ ಸೇತುವೆ ಪಕ್ಕದಲ್ಲಿ ಮತ್ತೊಂದು ನೂತನ ಸೇತುವೆ ನಿರ್ಮಾಣವಾಗಲಿದ್ದು, ಶೀಘ್ರ ಅದರ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಬೈಪಾಸ್ ರಸ್ತೆಯನ್ನು 4 ಪಥದ ರಸ್ತೆಯನ್ನಾಗಿ ಮಾಡಲಾಗಿದ್ದು, ಈ ರಸ್ತೆಗೆ ಹಾಲಿ ಇರುವ ದ್ವಿಪಥದ ಸೇತುವೆಯಿಂದಾಗುವ ವಾಹನ ದಟ್ಟಣೆ ತಪ್ಪಿಸಲು ಹಾಲಿ ಇರುವ ಸೇತುವೆ ಪಕ್ಕದಲ್ಲಿ ಮತ್ತೋಂದು ದ್ವಿಪಥದ ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಇದಕ್ಕಾಗಿ 35 ಕೋಟಿ ರೂ.ಗಳ ಕಾಮಗಾರಿಯ ಅಂದಾಜು ಪಟ್ಟಿಗೆ ತಾಂತ್ರಿಕ ಮಂಜೂರಾತಿ ನೀಡಿದ್ದು ಟೆಂಡರ್ ಕರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ನೂತನ ಸೇತುವೆಯ ವಿವರಗಳು ಹೀಗಿವೆ:
- ಸೇತುವೆಯ ಓಟ್ಟು ಉದ್ದ ರಸ್ತೆ ಸೇರಿದಂತೆ-290 ಮೀಟರ್
- ಸೇತುವೆಯ ಕಟ್ಟಡದ ಉದ್ದ-272 ಮೀಟರ್
- ಆರ್‌ಸಿಸಿ ಗರ್ಡರ್ ಸೇತುವೆ
- ತಳಪಾಯ ಓಪನ್ ಫೌಂಡೇಷನ್
- 16 ಸಂಖ್ಯೆಯ 17 ಮೀಟರ್ ಸ್ಪಾನ್‌ನ ಪಿಲ್ಲರ್’ಗಳು
- ನದಿಯ ತಳದ ಅಗಲ 200 ಮೀಟರ್
- ನದಿಯಲ್ಲಿ ನೀರಿನ ಹರಿವು 4883 ಕ್ಯುಮೆಕ್ಸ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post