ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಇಕ್ಕೇರಿ ಬಳಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿ ಭರತ್ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ನಡೆದಿದೆ.
ಆರೋಪಿಯನ್ನು ವಶಕ್ಕೆ ಪಡೆದು, ಮಹಜರ್ ಮಾಡಿ, ವಾಪಾಸ್ ಬರುವ ವೇಳೆ ಸಾಗರದ ಬನದಕೊಪ್ಪದ ಬಳಿ ಪೊಲೀಸರ ಮೇಲೆಯೇ ಭರತ್ ಹಲ್ಲೆಗೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪೋಲಿಸ್ ಪೇದೆ ಚಂದ್ರನಾಯ್ಕ್ ಎಂಬುವವರನ್ನು ದೂಡಿ ಎಸ್ಕೇಪ್ ಆಗಲು ಯತ್ನಿಸಿದಾಗ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಆರೋಪಿ ಭರತ್ ಕಾಲಿಗೆ ಶೂಟ್ ಮಾಡಿದ್ದಾರೆ.
ಆರೋಪಿ ಭರತ್ ಕಾಲಿಗೆ ಗಾಯವಾಗಿದ್ದು,ಪೋಲೀಸ್ ಪೇದೆ ಮತ್ತು ಆರೋಪಿಯನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಗರದ ಹಳೇ ಇಕ್ಕೇರಿ ಬಳಿಯ ಕುನ್ನಿ ಕೊಡ್ಲು ಗ್ರಾಮದಲ್ಲಿನ ವಾಸಿಗಳಾದ ಪ್ರವೀಣ್ ಕುಮಾರ್ ಮತ್ತು ಆತನ ತಾಯಿ ಬಂಗಾರಮ್ಮನ ಭೀಕರ ಕೊಲೆ ಅ.11 ರಂದು ಮಧ್ಯರಾತ್ರಿ ನಡೆದಿತ್ತು. ಈ ಕೊಲೆಗೆ ಸಾಕ್ಷಿಯಾಗಿದ್ದು ಪ್ರವೀಣನ ಹೆಂಡತಿ ರೋಹಿಣಿ ಮತ್ತು 10 ತಿಂಗಳ ಮಗು. ಕೊನೆಗೂ ಪತ್ತೆಯಾದ ಡಬಲ್ ಮರ್ಡರ್ ಆರೋಪಿ ಭರತ್ ಗೌಡ. ಈತನ ಪ್ರಿಯತಮೆ ಶೃತಿ ಒಂದು ಕಾಲದಲ್ಲಿ ಕೊಲೆಯಾದ ಪ್ರವೀಣನ ಪ್ರಿಯತಮೆಯಾಗಿದ್ದವಳು. ಅವಳ ನಿರ್ದೇಶನದಲ್ಲಿಯೇ ಈ ಕೊಲೆ ನಡೆದಿದೆ ಎನ್ನಲಾಗಿದೆ.
ಈ ಕೇಸಿನ ಹಿಂದೆ ಹಗಲು ರಾತ್ರಿ ಬಿದ್ದವರು ಡಿಸಿಐಬಿ ಕುಮಾರ ಸ್ವಾಮಿ ಮತ್ತು ಮಹಿಳಾ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಅಭಯ ಪ್ರಕಾಶ ಸೋಮನಾಳ್ ಮತ್ತು ತಂಡ..ಎಸ್ ಪಿ, ಅಡಿಷನಲ್ ಎಸ್ ಪಿ ಮತ್ತು ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಇಲ್ಲಿ ಅಭಿನಂದನೆ ಸಲ್ಲಿಸಲೇಬೇಕು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post