ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಮಲೆನಾಡಿನ ಒಂಟಿ ಮನೆಗಳಲ್ಲಿ ಮೂರು ಕಡೆ ಹಾಡಹಗಲೇ ದರೋಡೆ ಪ್ರಕರಣ ನಡೆದಿದ್ದು, ಮಲೆನಾಡಿಗರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.

ತಾಲೂಕಿನ ಚುಟ್ಟಿಕೆರೆ, ತುಮರಿ ಹಾಗೂ ಬ್ರಾಹ್ಮಣ ಕೆಪ್ಪಿಗೆಯಲ್ಲಿ ದರೋಡೆ ನಡೆದಿದ್ದು, ಲಕ್ಷಾಂತರ ರೂ. ಮೌಲ್ಯದ ಒಡವೆ ಹಾಗೂ ಹಣ ಕಳುವಾಗಿದೆ.
ಬ್ರಾಹ್ಮಣ ಕೆಪ್ಪಿಗೆಯಲ್ಲಿ ರಾಜು ಎನ್ನುವವರ ಮನೆಯಲ್ಲಿ 3 ಲಕ್ಷ ರೂ. ಮೌಲ್ಯದ ಬಂಗಾರ ಒಡವೆ ಹಾಗೂ 20 ಸಾವಿರ ರೂ. ಹಣ ಕಳವು ಮಾಡಲಾಗಿದೆ. ಉಳಿದ ಎರಡು ಮನೆಗಳ ದರೋಡೆ ಕುರಿತು ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಮೂರೂ ಸ್ಥಳಗಳಿಗೆ ಪೊಲೀಸರು ಭೇಟಿ ನೀಡಿ, ಪರೀಶಿಲನೆ ನಡೆಸಿದ್ದು, ತನಿಖೆ ಆರಂಭವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















