ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ಜಗತ್ತಿನ ಪರಿವರ್ತನೆಗೆ ಅನುಗುಣವಾಗಿ ತಯಾರಿ ನಡೆಸಬೇಕಿದೆ ಎಂದು ಗ್ಯಾಲಿಗರ್ ಕಂಪನಿ ತರಬೇತುದಾರ ಶಂಕರ್ ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ಪ್ರತಿಷ್ಠಿತ ಕಂಪನಿಯಾದ ಆಥುರ್ರ ಜೆ ಗ್ಯಾಲಿಗರ್ ಮಾಚೇನಹಳ್ಳಿ ಕಂಪನಿಯು ಎನ್‌ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಒಂದು ವಾರಗಳ ಪರಿವರ್ತನಾ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ಸ್ಪರ್ಧಾ ಜಗತ್ತಿಗೆ ಬೇಕಾಗುವಂತಹ ತಯಾರಿಗಳನ್ನು ವಿದ್ಯಾರ್ಥಿ ಜೀವನದಲ್ಲೇ ಪೂರ್ಣಗೊಳಿಸಿ. ಕಂಪನಿಗಳು ಅನೇಕ ಅವಕಾಶಗಳನ್ನು ನೀಡುತ್ತಿದ್ದರು ಕೌಶಕ್ಯತೆಯಿಂದ ಪಡೆದುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಥುರ್ರ ಜೆ ಗ್ಯಾಲಿಗರ್ ಕಂಪನಿ ಕೇಂದ್ರದ ಮುಖ್ಯಸ್ಥರಾದ ಶಿವಕುಮಾರ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶಿವಪ್ರಸಾದ್ ಬಿ.ಎಸ್. ಹಾಗೂ ಕಾಲೇಜಿನ ಉಪನ್ಯಾಸಕ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















