ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿನ ವಿದ್ಯಾರ್ಥಿಗಳು ಹೆಚ್ಚು ಕಾಲ ಸೋಷಿಯಲ್ ಮೀಡಿಯಾದಲ್ಲಿ ಸಮಯ ಕಳೆಯುವುದು ಆತಂಕಕಾರಿಯಾದ ವಿಷಯವಾಗಿದೆ ಎಂದು ಹೊಂಗಿರಣ ಪಿಯು ಕಾಲೇಜಿನ ಪ್ರಾಂಶುಪಾಲ ರೋಹಿತ್ ಅಭಿಪ್ರಾಯಪಟ್ಟರು.
ಮಾನಸ ಟ್ರಸ್ಟ್, ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು ವತಿಯಿಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ಕಾಲೇಜಿನ ಎಲ್ಲಾ ವೇದಿಕೆಗಳ ಉದ್ಘಾಟಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುಣಮಟ್ಟದ ಶಿಕ್ಷಣ ಇಂದಿನ ಸಮಾಜಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಿದೆ. ದೇಶಕಟ್ಟುವಲ್ಲಿ ಶಿಕ್ಷಣ, ಕಾಲೇಜು ಮತ್ತು ಯುವ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಿಗೆ ಇರುವ ಉತ್ಸಾಹಕ್ಕೆ ನೀರೆರೆದು ಪೋಷಿಸಿ ಸರಿಯಾದ ಮಾರ್ಗದರ್ಶನ ನೀಡುವ ಪೋಷಕರು, ಮಾರ್ಗದರ್ಶಕರು, ಶಿಕ್ಷಣ ಸಂಸ್ಥೆಗಳ ಅವಶ್ಯಕತೆ ತುಂಬಾ ಇದೆ ಎಂದರು.
ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾಗಳಲ್ಲೇ ಸಮಯ ಕಳೆಯುವುದು ಕಳವಳಕಾರಿಯಾಗಿದೆ. ವಿದ್ಯಾರ್ಥಿಗಳು ಜ್ಞಾನಿಗಳ ಮತ್ತೂ ಜ್ಞಾನ ಸಂಸ್ಥೆಗಳ ಒಡನಾಟದಲ್ಲಿ ಇರಬೇಕು. ಮೊಬೈಲ್ ಹಾಗೂ ಇಂಟರ್’ನೆಟ್ ಅನ್ನೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಲಭ್ಯವಿರುವ ಸೌಲಭ್ಯಗಳನ್ನು ಮುಂದಿನ ಜೀವನ ರೂಪಿಸಿಕೊಳ್ಳಲು ಉಪಯೋಗಿಸಿಕೊಳ್ಳಬೇಕು. ಚಾಟ್‌ಜಿಪಿಟಿಯಂತಹ ಆಪ್’ಗಳಿಂದ ವಿದ್ಯಾರ್ಥಿಗಳ ಕ್ರಿಯಾಶೀಲತೆ ಕ್ಷೀಣಿಸುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಕ್ರಮೇಣ ಸೋಶಿಯಲ್ ಮೀಡಿಯಾದಿಂದ ಸಮಯ ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕು. ಬೌದ್ಧಿಕ ಸಾಮರ್ಥ್ಯವನ್ನು ಬೆಳೆಸುವ ತಾಂತ್ರಿಕ ಸೌಲಭ್ಯಗಳನ್ನ ಮಾತ್ರ ಯುಟ್ಯೂಬ್ ಹಾಗೂ ಫೇಸ್’ಬುಕ್ ಮತ್ತು ಚಾಟ್ ಜಿಪಿಟಿಗಳಿಂದ ಪಡೆಯಬೇಕು.ಆಗ ಮಾತ್ರ ವಿದ್ಯಾರ್ಥಿಗಳು ನಿಜವಾದ ವಿದ್ಯಾರ್ಜನೆ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬಿಲ್ ಗೇಟ್ಸ್, ಸತ್ಯ ನಡೆಲ್ಲಾ, ಜಾಕ್ ಮಾರ್ಕ್ ಝುಕರ್’ಬರ್ಗ್, ಅಂಬಾನಿ ಇವರೆಲ್ಲ ಶ್ರಮಜೀವಿಗಳು, ಸಾಧನೆ ಮಾಡಿದವರು. ಈ ಎಲ್ಲ ಶ್ರೀಮಂತ ವ್ಯಕ್ತಿಗಳು ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿ ಶ್ರಮ ಪಟ್ಟು ಜೀವನದಲ್ಲಿ ಮುಂದೆ ಬಂದಿದ್ದಾರೆ. ಅವರ ಹಾಗೆ ಆಗಬೇಕಾದರೆ ಶ್ರಮಪಡಬೇಕು. ಜ್ಞಾನದ ಹಿಂದೆ ಹೋಗಬೇಕೆ ಹೊರತು ಮಾರ್ಕ್ಸ್ ಹಿಂದೆ ಹೋಗಬಾರದು. ಅಂತಹ ಜ್ಞಾನವನ್ನು ಕೊಡುವ ವಿದ್ಯಾಸಂಸ್ಥೆಗಳು ಬೇಕು ಎಂದು ಅಭಿಪ್ರಾಯಪಟ್ಟರು.
ಸ್ಟಾರ್ಟ್ ಆಪ್‌ಗಳನ್ನು ಮಾಡುವ ಕೌಶಲ್ಯ ಹಾಗೂ ಮಹತ್ವದ ಬಗ್ಗೆ ತಿಳಿಸಿದರು. ಕಲಿಕೆಯು ಮುಂದುವರಿಕೆಯಾಗಬೇಕು. ನಮ್ಮನ್ನು ಹಿಂದಕ್ಕೆ ತಳ್ಳುವಂತೆ ಇರಬಾರದು. ಸಾಕಷ್ಟು ಜ್ಞಾನ ಸಂಪಾದನೆಯ ಕಡೆಗೆ ನಮ್ಮ ಆಸಕ್ತಿ ಬೆಳೆಸಿಕೊಂಡರೆ ಮಾತ್ರ ನಿಜವಾದ ಪದ ಪಡೆದಂತೆ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಮಾತನಾಡಿ, ಉದ್ಯೋಗಕ್ಕೆ ಬೇಕಾಗುವ ವ್ಯಕ್ತಿತ್ವವನ್ನು ಹೇಗೆ ಅಭಿವೃದ್ಧಿ ಪಡಿಸಿಕೊಳ್ಳಬೇಕು. ಅದಕ್ಕೆ 3 ವರ್ಷದ ಪದಯಲ್ಲಿ ವಿದ್ಯಾರ್ಥಿಗಳು ಹೇಗೆ ಕೌಶಲ್ಯಗಳನ್ನು ಹೊಂದಲು ಪ್ರತಿಯೊಂದು ವೇದಿಕೆ ಹಾಗೂ ಘಟಕಗಳು ಹೇಗೆ ಸಹಾಯಕವಾಗಿದೆ ಎಂದು ತಿಳಿಸಿದರು.
ಕಾಲೇಜಿನ ಎನ್‌ಎಸ್‌ಎಸ್ ವೇದಿಕೆಯ ಸಾಧನೆಯನ್ನು ಪ್ರಸ್ತುತ ಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್ ಘಟಕಗಳ ಮಹತ್ವವನ್ನು ತಿಳಿಸಿದರು.
ಕಾಲೇಜಿನ ಅನ್ವೇಷಣಾ, ಸಾತ್ಯ ಸಹೃದಯ, ಬೆಳ್ಳಿಸಾಕ್ಷಿ ಕಲ್ಪನಾ ಹಾಗೂ ಇತರ ವೇದಿಕೆಗಳ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು.
ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಪ್ರೊ.ರಾಮಚಂದ್ರ ಬಾಳಿಗ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಲಾಂಗ್ ಟರ್ಮ್ಗೋಲ್ ಬಗ್ಗೆ MSDC SKILL ಕೋರ್ಸ್ಗಳ ಬಗ್ಗೆ ಮಹತ್ವವನ್ನು ತಿಳಿಸಿ ಕಾಲೇಜು ಘಟಕಗಳ ಪ್ರಾಮುಖ್ಯತೆ ತಿಳಿಸಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.
ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಪಕಿ ಕುಮಾರಿ ಯೋಶಿತ ಸೊನಲೆ ಅವರು ಅತಿಥಿಗಳನ್ನು ಪರಿಚಯಿಸಿದರು.
ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಮಂಜುನಾಥ್ ಸ್ವಾಮಿ ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಮೋಹನ್ ಕುಮಾರ್ ಅವರು ವಂದಿಸಿ, ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನಾನ್ಸಿ ಲವೀನಾ ಪಿಂಟೋ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಐಕ್ಯೂಎಸಿ ಸಂಯೋಜಕರಾದ ಡಾ. ಅರ್ಚನಾ ಭಟ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post