ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಪೋಸ್ಟ್ ಮಾಸ್ಟರ್ ಶಶಿಧರ್ ಅವರ ನೇತೃತ್ವದಲ್ಲಿ ಭದ್ರಾವತಿ ಮುಖ್ಯ ಅಂಚೆ ಕಚೇರಿಯಲ್ಲಿ ನೀಡುತ್ತಿರುವ ಸೇವೆ ಅತ್ಯುತ್ತಮವಾಗಿದ್ದು, ತಮ್ಮ ಹಿತಕ್ಕಿಂತಲೂ ಗ್ರಾಹಕರ ಸೇವೆಯೇ ಮುಖ್ಯ ಎಂಬುದನ್ನು ಇಲ್ಲಿನ ಸಿಬ್ಬಂದಿಗಳು ಅಕ್ಷರಶಃ ಜಾರಿಗೆ ತರುತ್ತಿರುವುದು ಶ್ಲಾಘನೀಯ ಕಾರ್ಯ ವಿಐಎಸ್’ಎಲ್ ಜಿಎಂ ಪ್ರವೀಣ್ ಕುಮಾರ್ ಅಭಿಪ್ರಾಯಪಟ್ಟರು.
ವಿಶ್ವ ಅಂಚೆ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಅಂಚೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಚೆ ಸಪ್ತಾಹ ಹಾಗೂ ಸಾಮಾನ್ಯ ಸೇವೇ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬ್ಯಾಂಕಿಂಗ್ ವ್ಯವಸ್ಥೆಗೆ ಹೋಲಿಕೆ ಮಾಡಿದರೆ ಅಂಚೆ ಇಲಾಖೆಯ ಹಲವು ವ್ಯವಸ್ಥೆಗಳು ಜನರಿಗೆ ಕೊಂಚ ಆಪ್ಯಾಯಮಾನವಾಗಿದೆ. ಜನರೊಂದಿಗೆ ಪ್ರಮುಖವಾಗಿ ಗ್ರಾಮೀಣ ಜನರೊಂದಿಗೆ ಅಂಚೆ ಇಲಾಖೆ ಭಾವನಾತ್ಮಕ ಸಂಬಂಧ ಹೊಂದಿದೆ. ಇಂದಿನ ಕಾಲಮಾನಕ್ಕೆ ತಕ್ಕಂತೆ ಅಂಚೆ ಇಲಾಖೆ ತನ್ನ ವ್ಯವಸ್ಥೆಯನ್ನು ಉನ್ನತೀಕರಗೊಳಿಸಿಕೊಂಡಿರುವುದು ಅತ್ಯಂತ ಸ್ವಾಗತಾರ್ಹ ವಿಚಾರವಾಗಿದೆ ಎಂದರು.
ಭದ್ರಾವತಿ ಉಪವಿಭಾಗದ ಐಪಿ ಪ್ರಹ್ಲಾದ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹಲವಾರು ಯೋಜನೆಗಳು ಜನರಿಗೆ ನೇರವಾಗಿ ದೊರೆಯಬೇಕು ಎಂಬ ಉದ್ದೇಶದಿಂದ ಅಂಚೆ ಇಲಾಖೆಯ ಮೂಲಕ ಸಾಮಾನ್ಯ ಸೇವಾ ಕೇಂದ್ರವನ್ನು ಆರಂಭಿಸಲಾಗಿದೆ. ನಮ್ಮಲ್ಲೂ ಸಹ ಅದು ಇಂದಿನಿಂದ ಆರಂಭಗೊಂಡಿದ್ದು, ಗ್ರಾಹಕರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಶಿವಮೊಗ್ಗ ವಿಭಾಗದ ಎಂಇ ರಾಘವೇಂದ್ರ ಹೌರೇಳ್ ಮಾತನಾಡಿ, ಮಾಡುವ ಕೆಲಸಗಳನ್ನು ಒಂದು ಉತ್ತಮ ಯೋಜನೆಯ ಮೂಲಕ ಮಾಡುವುದು, ಸ್ಮಾರ್ಟ್ ವರ್ಕ್ ಮಾಡುವುದನ್ನು ಸಿಬ್ಬಂದಿಗಳು ರೂಢಿಸಿಕೊಳ್ಳಬೇಕು. ಈ ಹಿಂದಿನಂತೆಯೇ ಪೋಸ್ಟ್ ಕಾರ್ಡ್ ಬರೆಯುವ ಸಂಸ್ಕೃತಿಯನ್ನು ಜನರನ್ನು ಮೂಢಿರುವ ಕಾರ್ಯವನ್ನು ಸಿಬ್ಬಂದಿಗಳು ಮಾಡಬೇಕು ಎಂದರು.
ವಿಐಎಸ್’ಎಲ್ ಮಾಜಿ ಅಧ್ಯಕ್ಷ ಬಾಲಕೃಷ್ಣ, ಹಿರಿಯರಾದ ಶಿವಾಜಿ, ಗಣೇಶ್, ಏಜೆಂಟರು ಸೇರಿದಂತೆ ಹಲವರು ಅಂಚೆ ಇಲಾಖೆಯ ಸೇವೆಗಳ ಕುರಿತಾಗಿ ಕೆಲವು ಸಲಹೆಗಳನ್ನು ನೀಡಿದರು.
ಪೋಸ್ಟ್ ಮಾಸ್ಟರ್ ಶಶಿಧರ್ ಮಾತನಾಡಿ, ಏಜೆಂಟರು ಹಾಗೂ ಗ್ರಾಹಕರು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಪರಿಹಾರ ಮಾಡುವ ಭರವಸೆ ನೀಡಿದರು. ಇಂದಿನಿಂದ ಆರಂಭವಾಗಿವು ಸಾಮಾನ್ಯ ಸೇವಾ ಕೇಂದ್ರದ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕರತಾಡನ ಮಾಡುವ ಮೂಲಕ ಸಾಮಾನ್ಯ ಸೇವಾ ಕೇಂದ್ರ()ವನ್ನು ಉದ್ಘಾಟಿಸಲಾಯಿತು.
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಇತ್ತೀಚೆಗೆ ಕೋವಿಡ್’ನಿಂದ ನಿಧನರಾಗಿರುವ ಅಂಚೆ ಇಲಾಖೆಯ ನೌಕರರಿಗೆ ಕಾರ್ಯಕ್ರಮದ ಆರಂಭಕ್ಕೂ ಮನ್ನ ಒಂದು ನಿಮಿಷದ ಮೌನಾಚರಣೆ ನಡೆಸಿ, ಸಂತಾಪ ಸೂಚಿಸಲಾಯಿತು.
ಅನು ಅವರು ಪ್ರಾಸ್ತಾವಿಕ ಭಾಷಣ ನಡೆಸಿದರು. ನಿತ್ಯಾನಂದ ಪ್ರಾರ್ಥಿಸಿ, ವಿಮಲಾ ವಂದಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ನಡೆಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post