ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಮೆರವಣಿಗೆಯನ್ನು ರದ್ದು ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಸೀಮಿತ ವ್ಯಕ್ತಿಗಳಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ ಎಂದು ಮೇಯರ್ ಸುವರ್ಣಾ ಶಂಕರ್ ಹೇಳಿದ್ದಾರೆ.
ಹಳೇ ಜೈಲು ಆವರಣದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಸುವ ಕುರಿತಾಗಿ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಅ.26ರಂದು ಬನ್ನಿ ಮುಡಿಯುವ ಕಾರ್ಯಕ್ರಮ ಹಳೇ ಜೈಲು ಆವರಣದಲ್ಲಿಯೇ ನಡೆಯಲಿದ್ದು, ತಹಶೀಲ್ದಾರ್ ಅವರು ಬನ್ನಿ ಕಡಿಯಲಿದ್ದಾರೆ. ಈ ಬಾರಿ ಐದು ದೇವರು ಮಾತ್ರ ಭಾಗವಹಿಸಲಿವೆ. ರಾವಣ ಹಾಗೂ ಪಟಾಕಿ ಸುಡಲಾಗುವುದು. ಆದರೆ ಸಾರ್ವಜನಿಕರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲವಿಲ್ಲ ಎಂದರು.
ಕೊರೋನಾ ಸೋಂಕು ಹಿನ್ನೆಲೆಯಲ್ಲಿ ದಸರಾ ಮೆರವಣಿಗೆಯನ್ನು ರದ್ದುಗೊಳಿಸಲಾಗಿದ್ದು, ಸಕ್ರೆಬೈಲಿನಿಂದ ಆನೆ ಕರೆಸಿ, ಗಜಪೂಜೆ ಸಲ್ಲಿಸಿ, ವಾಪಾಸ್ ಕಳುಹಿಸಲಾಗುವುದು ಎಂದರು.
ಉಪಮೇಯರ್ ಸುರೇಖಾ ಮುರಳೀಧರ್, ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ಪ್ರತಿಪಕ್ಷ ನಾಯಕ ಎಚ್.ಸಿ. ಯೋಗೇಶ್, ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ಮೊದಲಾದ ಪಾಲಿಕೆ ಸದಸ್ಯರು ಸ್ಥಳ ಪರಿಶೀಲನೆ ವೇಳೆ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post