ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಹೊಳಲೂರು ಗ್ರಾಮದಲ್ಲಿರುವ 66/11 ಕೆವಿ ವಿವಿ ಕೇಂದ್ರದಲ್ಲಿ ತ್ರೆûಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಗ್ರಾಮಾಂತರ ಭಾಗದ ಕೆಲವು ಹಳ್ಳಿಗಳಲ್ಲಿ ಅ.8ರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಹೊಳಲೂರು, ಹರಮಘಟ್ಟ, ಕೊಮ್ಮನಾಳ್, ಹೊಳೆಹಟ್ಟಿ, ಬೇಡರಹೊಸಳ್ಳಿ, ಬಿಕ್ಕೋನಹಳ್ಳಿ, ಬುಳ್ಳಾಪುರ, ಬೂದಿಗೆರೆ, ಬೀರನಕೆರೆ, ಮಡಿಕೆಚೀಲೂರು, ಆಲದಹಳ್ಳಿ, ಸೋಮಿನಕೊಪ್ಪ, ಸುತ್ತುಕೋಟೆ, ಕ್ಯಾತಿನಕೊಪ್ಪ, ಹಾಡೋನಹಳ್ಳಿ, ಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರು ಗ್ರಾಮಗಳು.
ನಗರ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ?
ನಗರ ಉಪವಿಭಾಗ-2 ರ ವ್ಯಾಪ್ತಿಯಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ವ್ಯಾಪ್ತಿಯಲ್ಲಿ ಬರುವ ಕೋಟೆ ರಸ್ತೆ, ಅಪ್ಪಾಜಿ ರಾವ್ ಕಾಂಪೌಂಡ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಅ.8 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post