ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಿಮ್ಸ್ ಮುಂಭಾಗದಲ್ಲಿ ಹೊರಗುತ್ತಿಗೆ ನೌಕರರ ಪ್ರತಿಭಟನೆ ಇಂದು 5ನೆಯ ದಿನಕ್ಕೆ ಕಾಲಿಟ್ಟಿದ್ದು, ಈ ವೇಳೆಯಲ್ಲಿ ವಿನಯ್ ರಾಜಾವತ್ ಹಾಗೂ ಪ್ರತಿಭಟನಾಕಾರರು ಅಸ್ವಸ್ಥಗೊಂಡ ಘಟನೆ ನಡೆದಿದೆ.
ಸೆ.21 ರಿಂದ ಸಿಮ್ಸ್ ಮುಂದೆ ಕೆಲಸ ತ್ಯಜಿಸಿ ಹೊರಗುತ್ತಿಗೆ ನೌಕರರು ಹೊರಗುತ್ತಿಗೆ ಪದ್ದತಿ ರದ್ದಪಡಿಸುವಂತೆ ಒತ್ತಾಯಿಸಿ ಅನರ್ಧಿಷ್ಠಾವಧಿ ಕಾಲ ಉಪವಾಸ ಸತ್ಯಾಗ್ರಹ ಚಳುವಳಿ ನಡೆಸುತ್ತಿದ್ದಾರೆ.
ಇದರ ಭಾಗವಾಗಿ ಹೊರಗುತ್ತಿಗೆ ನೌಕರರು ಮತ್ತು ವಿದ್ಯಾರ್ಥಿ ಸಂಘಟನೆ ರಕ್ತ ಕ್ರಾಂತಿ ಚಳುವಳಿಯನ್ನು ಹಮ್ಮಿಕೊಂಡಿತ್ತು.
ಈ ವೇಳೆ ಪ್ರತಿಭಟನಾ ಸ್ಥಳದಲ್ಲಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ ಹಾಗೂ ಸಚಿವ ಈಶ್ವರಪ್ಪ ಅವರ ಭಾವಚಿತ್ರಕ್ಕೆ ಹಾಲು ಹಾಗೂ ಹೂವಿನ ಅಭಿಶೇಕ ಮಾಡಿ, ಆನಂತರ ಸಿರಿಂಜ್ ಮೂಲಕ ತಮ್ಮ ರಕ್ತ ತೆಗೆದು ಭಾವಚಿತ್ರದ ಪಾದಕ್ಕೆ ಹಚ್ಚಿದರು ವಿನಯ್ ರಾಜಾವತ್…
ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post