ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಒಂದು ದೇಶ, ಒಂದು ವೈದ್ಯಕೀಯ ಪದವಿಯ ದೃಷ್ಟಿಕೋನ ಇಟ್ಟುಕೊಂಡು ರಾಷ್ಟ್ರೀಯ ವೈದ್ಯಕೀಯ ಆಯೋಗ ಟೀಚಿಂಗ್ ಎಲಿಜಿಬಿಲಿಟಿ ಕ್ವಾಲಿಫಿಕೇಷನ್ ಅಲ್ಲಿ ಮಹತ್ತರವಾದ ಬದಲಾವಣೆ ತಂದಿರುವುದು, ವೈದ್ಯಕೀಯ ಶಿಕ್ಷಣದಲ್ಲಿ ಪಿಜಿ ಡಿಪ್ಲೊಮಾ ಪದವೀಧರರನ್ನು ವೈದ್ಯಕೀಯ ಕಾಲೇಜುಗಳಲ್ಲಿ ಸಹಾಯಕ ಅಧ್ಯಾಪಕರಾಗಿ ಬಡ್ತಿ ನೀಡಲು ನಿರ್ಧರಿಸಿರುವುದು ಹಾಗೂ ನಿಯಮಾವಳಿ ಸಡಿಲಿಸಿರುವುದಕ್ಕೆ ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಶ್ಲಾಘಿಸಿದ್ದಾರೆ. #DrDhananjayaSarji
Also Read>> ಭದ್ರಾವತಿ | ಸೈಲ್-ವಿಐಎಸ್‌ಎಲ್‌ನಲ್ಲಿ ಗಣರಾಜ್ಯೋತ್ಸವ | ಬಿ.ಎಲ್. ಚಂದ್ವಾನಿ ಧ್ವಜಾರೋಹಣ
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಮಹತ್ತರ ಬದಲಾವಣೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಮಾನತೆ ಹಾಗೂ ವೈದ್ಯಕೀಯ ಸಂಸ್ಥೆಗಳಲ್ಲಿ ಕೊರತೆ ಇರುವ ಅರ್ಹ ಬೋಧನಾ ಸಿಬ್ಬಂದಿಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಷ್ಟು ದಿನ ಕ್ಲಿನಿಕಲ್ ಅನುಭವ ಹೊಂದಿರುವವರು ಸೀನಿಯರ್ ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಈಗ ಇದರ ಜೊತೆಗೆ ಸಹಾಯಕ ಪ್ರಾಧ್ಯಾಪಕರಾಗಿಯೂ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.
ಇದರಿಂದ ಸಾವಿರಾರು ಸ್ನಾತ್ತಕೋತ್ತರ ಪದವಿ ಮತ್ತು ಡಿಪ್ಲೊಮಾ ವೈದ್ಯರು ಯಾವುದೇ ಬಡ್ತಿ ಇಲ್ಲದೆ ಸತತವಾಗಿ 10 ರಿಂದ 15 ವರ್ಷಗಳ ಕಾಲ ವೈದ್ಯಕೀಯ ಸಂಸ್ಥೆಗಳಲ್ಲಿ ಬೋಧನೆ ಮಾಡುತ್ತಿದ್ದು, ಈ ನಿಯಮದಿಂದ 2017ರ ಪೂರ್ವದಲ್ಲಿ ಸೇರಿರುವ ಎಲ್ಲ ಪಿಜಿ ಡಿಪ್ಲೊಮಾ ಪದವೀಧರ ವೈದ್ಯರಿಗೆ ಇದರಿಂದ ಅನುಕೂಲವಾಗಿದೆ. ಅಧ್ಯಾಪಕರ ಕೊರತೆಯನ್ನು ಸರಿದೂಗಿಸಲು ಸಹಕಾರಿಯಾಗುತ್ತದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದ #NationalMedicalCommission ಈ ಕಲ್ಪನೆಯಿಂದ ವೈದ್ಯಕೀಯ ಪದವೀಧರರನ್ನು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್’ಗಳನ್ನು ಮಾಡಲು ಹೆಚ್ಚು ಪ್ರೇರೇಪಿಸಿದಂತಾಗುತ್ತದೆ. ಇದರಿಂದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮಾನವ ಸಂಪತ್ತನ್ನು ಸಮರ್ಥವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸಲು ಸಹಕಾರಿಯಾಗುತ್ತದೆ ಎಂದಿದ್ದಾರೆ.
ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಕ್ಲಿನಿಕಲ್ ಅನುಭವ ಹೊಂದಿರುವುದರಿಂದ ಯುವ ತಜ್ಞ ವೈದ್ಯರ ಹೊಸ ಪೀಳಿಗೆ ರೂಪಿಸಲು ಹಾಗೂ ಗ್ರಾಮೀಣ ಮತ್ತು ಸೇವೆ ಲಭ್ಯವಿಲ್ಲದ ಪ್ರದೇಶಗಳಲ್ಲಿ ವೈದ್ಯಕೀಯ ಅಧ್ಯಾಪಕರ ತುರ್ತು ಕೊರತೆಯನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವೈದ್ಯಕೀಯ ಶಿಕ್ಷಣದಲ್ಲಿ ಪಿಜಿ ಡಿಪ್ಲೊಮಾ ಹೊಂದಿರುವ ಪದವೀಧರರನ್ನು ವೈದ್ಯಕೀಯ ಕಾಲೇಜುಗಳಲ್ಲಿ ಬೋಧನೆ ಮಾಡುವಂತೆ ಹೇಳಿರುವ ಎನ್’ಎಂಸಿಯ ಈ ನಿರ್ಧಾರದಿಂದ ವೈದ್ಯಕೀಯ ಶಿಕ್ಷಣದ ಒಟ್ಟಾರೆ ಗುಣಮಟ್ಟ ಸುಧಾರಿಸುವುದರ ಜೊತೆಗೆ ಭಾರತೀಯ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಬಲಪಡಿಸುತ್ತದೆ ಎಂದಿದ್ದಾರೆ.
ಮತ್ತೊಂದು ಪರಿವರ್ತನಾತ್ಮಕ ಆರಂಭಿಕ ಪ್ರಯತ್ನವೆಂದರೆ ಒಂದು ದೇಶ, ಒಂದು ವೈದ್ಯಕೀಯ ಪದವಿ ಕಲ್ಪನೆ, ಇದು ಭಾರತದಾದ್ಯಂತ ವೈದ್ಯಕೀಯ ಶಿಕ್ಷಣ ಗುಣಮಟ್ಟ ಮತ್ತು ಅರ್ಹತೆಯ ಮಾನಕೀಕರಣವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ತರಲಾಗಿದೆ. ಇದರಿಂದ ವೈದ್ಯಕೀಯ ವೃತ್ತಿಪರರಲ್ಲಿ ಪಠ್ಯಕ್ರಮ, ತರಬೇತಿ ಪರವಾನಗಿಯನ್ನು ಸಮಾನವಾಗಿಡುವತ್ತ ಗಮನ ಹರಿಸುತ್ತದೆ ಎಂದು ಡಾ.ಧನಂಜಯ ಸರ್ಜಿ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post