ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸುರಕ್ಷತೆ ದೃಷ್ಟಿಯಿಂದ ಮನೆ ಮಾಲೀಕರು ತಮ್ಮ ಮನೆಗಳನ್ನು ಬಾಡಿಗೆಗೆ ಕೊಡುವ ಸಂದರ್ಭದಲ್ಲಿ ಕೆಲವು ಸೂಚನೆಗಳನ್ನು ಪಾಲಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ತಮ್ಮ ಮನೆಗಳನ್ನು ಬಾಡಿಗೆಗೆ ಕೊಡುವ ಸಂಧರ್ಭದಲ್ಲಿ, ಬಾಡಿಗೆದಾರರ ಪೂರ್ವಾಪರ ಮತ್ತು ದಾಖಲೆಗಳಾದ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್ ಗಳನ್ನು ಪರಿಶೀಲಿಸಿ ಅವರುಗಳ ಮಾಹಿತಿಯನ್ನು ಖಚಿತ ಪಡಿಸಿಕೊಂಡ ನಂತರವೇ ಬಾಡಿಗೆಗೆ ನೀಡುವುದು ಮತ್ತು ಕಡ್ಡಾಯವಾಗಿ ಗುರುತಿನ ಚೀಟಿಗಳ ಜೆರಾಕ್ಸ್ ಪ್ರತಿಗಳನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ.
ಆಧಾರ್ ವೆಬ್ ಸೈಟ್ ನಲ್ಲಿನ ಡೌನ್ ಲೊಡ್ ಆಪ್ಷನ್ ನಲ್ಲಿ ಮನೆ ಬಾಡಿಗೆಗಾಗಿ ಬರುವ ವ್ಯಕ್ತಿಗಳು ನೀಡುವ ಆಧಾರ್ ಕಾರ್ಡ್ ನಲ್ಲಿನ ಆಧಾರ್ ಸಂಖ್ಯೆಯನ್ನು ನಮೂದಿಸಿ, ಸೆಂಡ್ ಓ.ಟಿ.ಪಿ ಯನ್ನು ಕ್ಲಿಕ್ ಮಾಡಿದಾಗ ಆಧಾರ್ ಕಾರ್ಡ್ ನಲ್ಲಿ ನೋಂದಾಯಿಸಲಾದ ಮೊಬೈಲ್ ನಂಬರ್ ಗೆ ಓ.ಟಿ.ಪಿ ಯು ಸ್ವೀಕೃತವಾಗಲಿದ್ದು, ಸದರಿ ಓಟಿಪಿಯು ಆ ವ್ಯಕ್ತಿಯ ಮೊಬೈಲ್ ನಂಬರ್ ನಲ್ಲಿ ಸ್ವೀಕೃತವಾದ ಬಗ್ಗೆ ಖಚಿತ ಪಡಿಸಿಕೊಂಡು, ಆಧಾರ್ ಕಾರ್ಡ್ ನ ನೈಜ್ಯತೆಯನ್ನು ದೃಡಪಡಿಸಿಕೊಳ್ಳಲು ಸೂಚಿಸಲಾಗಿದೆ.
Also read: ಅನುದಾನಿತ ನೌಕರರ ಸಾಲದ ಮೊಬಲಗನ್ನು ಖಜಾನೆ-2ರಲ್ಲಿ ಕಡಿತಗೊಳಿಸಲು ಆಗ್ರಹ
ಮನೆ ಬಾಡಿಗೆಗೆ ಬರುವ ವ್ಯಕ್ತಿಗಳು ಮಾಡುತ್ತಿರುವ ಕೆಲಸ ಹಾಗೂ ಕೆಲಸ ಮಾಡುತ್ತಿರುವ ಸ್ಥಳದ ವಿಳಾಸದ ವಿವರವನ್ನು ಪಡೆದು ಕೊಳ್ಳಲು ಸೂಚಿಸಲಾಗಿದೆ.
ಯಾವುದೇ ಅಪರಿಚಿತ ವ್ಯಕ್ತಿಗಳು ಹೊಸದಾಗಿ ತಮ್ಮ ಏರಿಯಾದಲ್ಲಿ ಮನೆಯನ್ನು ಬಾಡಿಗೆಗೆ ಕೇಳಿಕೊಂಡು ಬಂದ ಸಂದರ್ಭದಲ್ಲಿ ಅಥವಾ ವಾಸವಾಗಿದ್ದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ (9480803300) ಅಥವಾ ತುರ್ತು ಸಹಾಯವಾಣಿ – 112 ಗೆ ಕರೆ ಮಾಡಿ ಮಾಹಿತಿ ನೀಡಲು ಸೂಚಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post