ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರ-ಕುಂಸಿ ಸ್ಟೇಷನ್ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.49, 50 ಮತ್ತು 79ರ ಲೆವೆಲ್ ಕ್ರಾಸಿಂಗ್ನಲ್ಲಿ ತಾಂತ್ರಿಕ ಪರಿಶೀಲನೆ ಮಾಡುವುದಕ್ಕಾಗಿ ಗೇಟ್ಗಳನ್ನು ಮುಚ್ಚಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶಿಸಿದ್ದಾರೆ.
ಡಿಸೆಂಬರ್ 6ರಂದು:
ಎಲ್’ಸಿ ನಂ 50 ಡಿ.6ರ ರಾತ್ರಿ 10.30 ರಿಂದ ಡಿ.7ರ ರಾತ್ರಿ 7 ಗಂಟೆವರೆಗೆ ಎಲ್ಸಿ ನಂ 52ರ ಕಾಶಿಪುರ ಮತ್ತು ಎಲ್ಸಿ ನಂ-49 ರ ಸವಳಂಗ ಮಾರ್ಗದ ಮೂಲಕ ಉಷಾ ನರ್ಸಿಂಗ್ ಹೋಂ ಜೈಲ್ ಸರ್ಕಲ್, ವಿನೋಬನಗರ ಪೊಲೀಸ್ ಚೌಕಿ ಮುಖಾಂತರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಲಾಗಿದೆ.
ಡಿಸೆಂಬರ್ 9ರಂದು:
ಎಲ್’ಸಿ ನಂ-79 ಡಿ.9ರ ರಾತ್ರಿ 10.30 ರಿಂದ ಡಿ.10ರ ರಾತ್ರಿ 7 ಗಂಟೆವರೆಗೆ ಚೋರಡಿ-ಶೆಟ್ಟಿಕೊಪ್ಪ-ಸೂಡೂರು-5ನೇ ಮೈಲಿಗಲ್-ಆಯನೂರು ಮತ್ತು ಎಲ್ಸಿ 73ರ ಮಾರ್ಗವಾದ ಬಾಲೆಕೊಪ್ಪ ಚಿಕ್ಕಮರಸ-ಕುಂಸಿ ಮುಖಾಂತರ ಸಂಚರಿಸಲು ಅವಕಾಶ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post