ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತುಮಕೂರು ಹಾಗೂ ಶಿವಮೊಗ್ಗ ನಡುವೆ ಡಿ.13ರಿಂದ ನೂತನ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಲಿದ್ದು, ಈ ಮೂಲಕ ಮಲೆನಾಡಿಗರಿಗೆ ಇಲಾಖೆ ಮತ್ತೊಂದು ಕೊಡುಗೆ ನೀಡಿದೆ.
ನೈಋತ್ಯ ರೈಲ್ವೆ ಪ್ರಕಟಿಸಿರುವ ಮಾಹಿತಿಯಂತೆ, ಡಿ.13ರಿಂದ ಈ ನೂತನ ರೈಲು ಸಂಚಾರ ಆರಂಭವಾಗಲಿದೆ. ಸಂಜೆ 6.30ಕ್ಕೆ ತುಮಕೂರಿನಿಂದ ಹೊರಡಲಿರುವ ರೈಲು ರಾತ್ರಿ 11.50ಕ್ಕೆ ಶಿವಮೊಗ್ಗ ನಿಲ್ದಾಣ ತಲುಪಲಿದೆ. ಅದೇ ರೀತಿ ಪ್ರತಿದಿನ ಮುಂಜಾನೆ 4ಕ್ಕೆ ಹೊರಡಲಿರುವ ರೈಲು 9.25ಕ್ಕೆ ತುಮಕೂರು ತಲುಪಲಿದೆ.
ಎಲ್ಲೆಲ್ಲಿ ರೈಲು ನಿಲುಗಡೆ?
ತುಮಕೂರಿನಿಂದ ಹೊರಡಲಿರುವ ಈ ಪ್ಯಾಸೆಂಜರ್ ರೈಲು ಹೆಗ್ಗೆರೆ ಹಾಲ್ಟ್, ಮಲ್ಲಸಂದ್ರ, ಗುಬ್ಬಿ, ನಿಟ್ಟೂರು, ಸಂಪಿಗೆ ರೋಡ್, ಅಮ್ಮಸಂದ್ರ, ಬಾಣಸಂದ್ರ, ಅರಳಗುಪ್ಪೆ, ಕರಡಿ, ಬನಶಂಕರಿ ಹಾಲ್ಟ್, ತಿಪಟೂರು, ಶ್ರೀ ಶಾರದಾನಗರ, ಹೊನ್ನವಳ್ಳಿ ರೋಡ್, ಆದಿಹಳ್ಳಿ, ಅರಸೀಕೆರೆ, ಬಾಣಾವರ, ದೇವನೂರು, ಬಳ್ಳೆಕೆರೆ ಹಾಲ್ಟ್, ಕಡೂರು, ಬೀರೂರು, ಶಿವಪುರ, ಕೋರನಹಳ್ಳಿ, ತರೀಕೆರೆ, ಮಸರಹಳ್ಳಿ, ಭದ್ರಾವತಿ, ಶಿವಮೊಗ್ಗ ಹಾಲ್ಟ್’ಗಳಲ್ಲಿ ನಿಲುಗಡೆ ನೀಡಿ ಶಿವಮೊಗ್ಗ ಟೌನ್ ತಲುಪಲಿದೆ.
ಯಾವ ಸಮಯ?
ತುಮಕೂರು(ನಿರ್ಗಮನ) ಸಂಜೆ 6.40, ಹೆಗ್ಗೆರೆ ಹಾಲ್ಟ್ 6.46, ಮಲ್ಲಸಂದ್ರ 6.52, ಗುಬ್ಬಿ 7.01, ನಿಟ್ಟೂರು 7.12, ಸಂಪಿಗೆ ರೋಡ್ 7.30, ಅಮ್ಮಸಂದ್ರ 7.36, ಬಾಣಸಂದ್ರ 7.43, ಅರಳಗುಪ್ಪೆ 7.49, ಕರಡಿ 7.55, ಬನಶಂಕರಿ ಹಾಲ್ಟ್ 6, ತಿಪಟೂರು 8.08, ಶ್ರೀ ಶಾರದಾನಗರ 8.15, ಹೊನ್ನವಳ್ಳಿ ರೋಡ್ 8.25, ಆದಿಹಳ್ಳಿ 8.31, ಅರಸೀಕೆರೆ 8.45, ಬಾಣಾವರ 9.05, ದೇವನೂರು 9.15, ಬಳ್ಳೇಕೆರೆ ಹಾಲ್ಟ್ 9.26, ಕಡೂರು 9.35, ಬೀರೂರು 9.48, ಶಿವಪುರ 10.03, ಕೋರನಹಳ್ಳಿ 10.09, ತರೀಕೆರೆ 10.21, ಮಸರಹಳ್ಳಿ 10.37, ಭದ್ರಾವತಿ 11.18, ಶಿವಮೊಗ್ಗ ಹಾಲ್ಟ್ 11.34, ಶಿವಮೊಗ್ಗ ಟೌನ್ 11.50(ಆಗಮನ).
ಶಿವಮೊಗ್ಗ(ಆಗಮನ) ಮುಂಜಾನೆ 4, ಶಿವಮೊಗ್ಗ ಟೌನ್ 4.06, ಭದ್ರಾವತಿ 4.23, ಮಸರಹಳ್ಳಿ 4.31, ತರೀಕೆರೆ 4.46, ಕೋರನಹಳ್ಳಿ 4.56, ಶಿವಪುರ 5.03, ಬೀರೂರು 5.18, ಕಡೂರು 5.28, ಬಳ್ಳೇಕೆರೆ ಹಾಲ್ಟ್ 5.39, ದೇವನೂರು 5.49, ಬಾಣಾವರ 5.59, ಅರಸೀಕೆರೆ 6.25, ಆದಿಹಳ್ಳಿ 6.39, ಹೊನ್ನವಳ್ಳಿ ರೋಡ್ 6.46, ಶ್ರೀಶಾರದಾ ನಗರ 6.56, ತಿಪಟೂರು 7.20, ಬನಶಂಕರಿ ಹಾಲ್ಟ್ 7.27, ಕರಡಿ 7.23, ಅರಳಗುಪ್ಪೆ 7.39, ಬಾಣಸಂದ್ರ 7.46, ಅಮ್ಮಸಂದ್ರ 7.53, ಸಂಪಿಗೆ ರೋಡ್ 8, ನಿಟ್ಟೂರು 8.09, ಗುಬ್ಬಿ 8.18, ಮಲ್ಲಸಂದ್ರ 8.27, ಹೆಗ್ಗೆರೆ ಹಾಲ್ಟ್ 8.38 ತುಮಕೂರು 9.25(ಆಗಮನ).
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post