ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಾಗರ ಹಾಗೂ ತಾಳಗುಪ್ಪ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಹಳಿಗಳು ಮುಳುಗಿರುವ ಹಿನ್ನೆಲೆಯಲ್ಲಿ ತಾಳಗುಪ್ಪ-ಮೈಸೂರು ನಡುವಿನ ರಾತ್ರಿ ರೈಲನ್ನು ಇಂದು ಮಾತ್ರ ರದ್ದುಗೊಳಿಸಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮೈಸೂರು ವಿಭಾಗದ ಅಧಿಕಾರಿಗಳು ಮಾಹಿತಿ ಬಿಡುಗಡೆ ಮಾಡಿದೆ. ತಾಳಗುಪ್ಪ-ಮೈಸೂರು(06228) ನಡುವಿನ ಎಕ್ಸ್’ಪ್ರೆಸ್ ರೈಲು ಸಂಚಾರ ಜುಲೈ 23ರ ಇಂದಿಗೆ ಅನ್ವಯವಾಗುವಂತೆ ರದ್ದುಗೊಂಡಿದೆ.
ಇಂಟರ್’ಸಿಟಿ ರೈಲು ಸಂಚಾರದ ಕತೆ ಏನು?
ಇನ್ನು, ಬೆಂಗಳೂರು-ತಾಳಗುಪ್ಪ(06529) ಎಕ್ಸ್’ಪ್ರೆಸ್ ರೈಲಿಗೆ ಸಂಬಂಧಿಸಿದಂತೆ ಇಂದಿನಿಂದ ಶಿವಮೊಗ್ಗ ಹಾಗೂ ತಾಳಗುಪ್ಪ ನಡುವಿನ ಸಂಚಾರವನ್ನು ಮಾತ್ರ ರದ್ದುಪಡಿಸಲಾಗಿದೆ.
ತಾಳಗುಪ್ಪ-ಬೆಂಗಳೂರು(06530) ಎಕ್ಸ್’ಪ್ರೆಸ್ ರೈಲಿಗೆ ಸಂಬಂಧಿಸಿದಂತೆ ಜುಲೈ 24ರಿಂದ ಜಾರಿಗೆ ಬರುವಂತೆ ತಾಳಗುಪ್ಪ ಹಾಗೂ ಶಿವಮೊಗ್ಗ ನಡುವಿನ ಸಂಚಾರ ತಾತ್ಕಾಲಿಕವಾಗಿ ರದ್ದುಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post