ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಜೆಎನ್‌ಎನ್‌ಸಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಹಾಗೂ ಭಾರತ ಸರ್ಕಾರದ ಎಐಸಿಟಿಇ ಟ್ರೈನಿಂಗ್ ಅಂಡ್ ಲರ್ನಿಂಗ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಆನ್ಲೈನ್ ಮೂಲಕ ಆಗಸ್ಟ್ 30 ರಿಂದ ಐದು ದಿನಗಳ ಕಾಲ ‘ನಾವೆಲ್ ನ್ಯಾನೊಸ್ಟ್ರಕ್ಚರ್ ಮೆಗ್ನೀಶಿಯಮ್ ಅಲಾಯ್ ಫಾರ್ ಇಂಡಸ್ಟ್ರೀಯಲ್ ಅಂಡ್ ಬೈಯೊ ಮೆಡಿಕಲ್ ಅಪ್ಲಿಕೇಷನ್’ ಕುರಿತ ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಆಗಸ್ಟ್ 30 ರಂದು ಬೆಳಗ್ಗೆ 10 ಘಂಟೆಗೆ ಸಿಂಗಾಪುರ್ ನ್ಯಾಷನಲ್ ಯುನಿವರ್ಸಿಟಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾದ್ಯಾಪಕರಾದ ಡಾ.ಮನೋಜ್ ಗುಪ್ತ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಎ.ಎಸ್. ವಿಶ್ವನಾಥ, ಉಪಾಧ್ಯಕ್ಷ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ, ಕಾರ್ಯದರ್ಶಿ ಎಸ್.ಎನ್. ನಾಗರಾಜ, ಸಹ ಕಾರ್ಯದರ್ಶಿ ಅಮರೇಂದ್ರ ಕಿರೀಟಿ, ಖಜಾಂಚಿ ಸಿ.ಆರ್.ನಾಗರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಾಗಾರದ ಸಂಯೋಜಕರಾದ ಜೆಎನ್‌ಎನ್‌ಸಿಇ ಕಾಲೇಜಿನ ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ.ಎಂ.ಎಂ. ರಜತ್ ಹೆಗಡೆ, ಪ್ರಾಂಶುಪಾಲ ಡಾ. ಪಿ. ಮಂಜುನಾಥ, ವಿಭಾಗದ ಮುಖ್ಯಸ್ಥ ಡಾ.ಈ. ಬಸವರಾಜ್, ಸಹ ಪ್ರಾದ್ಯಾಪಕ ಎಸ್. ಪರಮೇಶ್ವರ್, ಎನ್.ಬಿ. ಪ್ರದೀಪ್, ವಿ.ಕೆ. ದೀಪಾಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು.
ಕೈಗಾರಿಕೆ ಮತ್ತು ಬೈಯೊಮೆಡಿಕಲ್ ಕ್ಷೇತ್ರದಲ್ಲಿ ಮೆಗ್ನೀಶಿಯಮ್ ಲೋಹಗಳ ಬಳಕೆ ಪ್ರಮುಖ ಪಾತ್ರ ವಹಿಸುತ್ತಿದೆ. ಅಟೋಮೇಷನ್, ವಾಯುಯಾನಗಳಲ್ಲಿ ಬಳಸುವ ರೆಕ್ಕೆ, ಚಕ್ರ, ಹಗುರವಾದ ಯಂತ್ರಭಾಗಗಳ ಉತ್ಫಾದನೆ ಸೇರಿದಂತೆ ಜೈವಿಕ ಸುರಕ್ಷತೆ, ಉತ್ತಮ ಡೆಕ್ವಿಲಿಟಿ ಮತ್ತು ತುಕ್ಕು ನಿರೋಧಕತೆಯಲ್ಲಿ ಇದನ್ನು ಬಳಸಲಾಗುತ್ತಿದೆ. ಇನ್ನು ಬೈಯೊಮೆಡಿಕಲ್ ಕ್ಷೇತ್ರದಲ್ಲಿ ಮೆಗ್ನೀಶಿಯಮ್ ಮೂಲಕ ಕಸಿ ಮತ್ತು ಮೂಳೆ ಚಿಕಿತ್ಸೆ, ಹೃದಯ ರಕ್ತನಾಳ ಸೇರಿದಂತೆ ಅಂಗಾಂಗಗಳ ಕಸಿ ಮತ್ತು ಹೆಚ್ಚಿನ ಚಿಕಿತ್ಸೆಯಲ್ಲಿ ಆಧುನಿಕ ತಂತ್ರಜ್ಞಾನಗಳು ಹಾಗೂ ಸಾಧನಗಳ ಅಭಿವೃದ್ಧಿ ಮತ್ತು ಬಳಕೆಯ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದೆ.
ಶಿವಮೊಗ್ಗದಲ್ಲಿ ಡಿ.ಆರ್.ಡಿ.ಒ ಸಂಶೋಧನಾ ಕೇಂದ್ರ ಸ್ಥಾಪಿಸುವ ಕುರಿತು ಈಚೆಗೆ ಏರ್ಪಡಿಸಿದ್ದ ಸಭೆಯಲ್ಲಿ ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನ ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ.ಎಂ.ಎಂ ರಜತ್ ಹೆಗಡೆ ಈ ವಿಷಯದ ಸಂಶೋಧನಾ ಅವಶ್ಯಕತೆಗಳ ಕುರಿತು ಸಮಗ್ರವಾಗಿ ಮಂಡಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಇದೇ ವಿಷಯದ ಹಲವು ಆವೃತಿ ಹಾಗೂ ಸಂಶೋಧನೆ ಕುರಿತು ಚರ್ಚೆ ನಡೆಯಲಿದೆ. ದೇಶದ ವಿವಿಧ ಭಾಗಗಳ ತಾಂತ್ರಿಕ ಮತ್ತು ವೈದ್ಯಕೀಯ ಸಂಶೋಧನಾರ್ಥಿಗಳು, ಉಪನ್ಯಾಕರುಗಳ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾರ್ಯಾಗಾರದ ಸಂಯೋಜಕರಾದ ಡಾ.ಎಂ.ಎಂ ರಜತ್ ಹೆಗಡೆ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post