ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀವಿಜಯ ಕಲಾನಿಕೇತನದಿಂದ ಜುಲೈ 22 ಮತ್ತು 23ರ ಸಂಜೆ 6 ಗಂಟೆಗೆ ರಾಜೇಂದ್ರನಗರದ ಪವಿತ್ರಾಂಗಣದಲ್ಲಿ ‘ಕಲಾ ಸಂಭ್ರಮ’ ನೃತ್ಯ – ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜುಲೈ 22ರ ಶನಿವಾರ, ಡಾ. ಕೆ.ಎಸ್. ಚೈತ್ರ ಮತ್ತು ಡಾ. ಕೆ.ಎಸ್. ಶುಭ್ರತಾರವರಿಂದ ‘ನೃತ್ಯ ಸಂಭ್ರಮ’ ಮತ್ತು ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ವಿದ್ವಾನ್ ಸಮ್ಮಿತ್ ನಟೇಶ್ ಮತ್ತು ಶ್ರೀ ಹರಿ ಬಿ.ಜೆ ಅವರಿಂದ ಸಂಗೀತ ಸಂಭ್ರಮ ಕಾರ್ಯಕ್ರಮವಿರುತ್ತದೆ.
ಜುಲೈ23ರ ಭಾನುವಾರದಂದು ಡಾ. ಕೆ.ಎಸ್.ಶುಭ್ರತಾ ರವರ ಶಿಷ್ಯರಿಂದ ‘ಮಾರ್ಗಂ’ ಭರತನಾಟ್ಯ ಕಾರ್ಯಕ್ರಮವಿರುತ್ತದೆ. ನಿವೃತ್ತ ಪ್ರಾಂಶುಪಾಲರೂ, ರಂಗ ಕರ್ಮಿಗಳೂ ಆದ ಪ್ರೊ. ಕಾಂತೇಶ್ ಮೂರ್ತಿಯವರು ಅತಿಥಿಗಳಾಗಿ ಆಗಮಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್. ಉಮೇಶ್ ಉಪಸ್ಥಿತರಿರುವರು.
Also read: ಕುವೆಂಪು ವಿವಿ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಎನ್‌ಎಸ್‌ಯುಐ ಪ್ರತಿಭಟನೆ
ಶ್ರೀವಿಜಯದ ಅಧ್ಯಕ್ಷ ಡಾ. ಕೆ.ಆರ್.ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನ ಸಹಾಯ ಯೋಜನೆಯಡಿಯಲ್ಲಿ ನಡೆಯಲಿದೆ. ಸಹೃದಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೇಂದು ಶ್ರೀವಿಜಯದ ನಿರ್ದೇಶಕಿ ಡಾ. ಕೆ.ಎಸ್.ಪವಿತ್ರಾ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post