ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸರ್ವ ಸದಸ್ಯರ ಸಭೆಯನ್ನು ಅ.8 ರಂದು ಬೆಳಗ್ಗೆ 10 ಗಂಟೆಗೆ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಕೆ.ವಿ. ಶಿವಕುಮಾರ್ ಹೇಳಿದರು.
ಅವರು ಇಂದು ಮೀಡಿಯಾ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡುವರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅರಸಾಳು ರಂಗನಾಥ್ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರನ್ನು ಸನ್ಮಾನಿಸಲಾಗುವುದು ಎಂದರು.

Also read: ವಿಐಎಸ್’ಎಲ್ ಕಾರ್ಖಾನೆ ಆವರಣದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ? ಆತಂಕ ಉದ್ಬವ
ಈ ಬಾರಿಯ ಪ್ರಶಸ್ತಿಯನ್ನು ವಿಜಯವಾಣಿ ವರದಿಗಾರ ನವೀನ್ ಬಿಲ್ಗುಣಿ, ಛಾಯಾಗ್ರಾಹಕ ಯೋಗರಾಜ್, ಉದಯವಾಣಿ ವರದಿಗಾರ ಜಿ.ಎಸ್. ಸುದೀಂದ್ರ, ಪ್ರಜಾವಾಣಿ ವರದಿಗಾರರಾದ ನಾ. ರವಿ, ನಿರಂಜನ, ರವಿ. ಆರ್. ತಿಮ್ಲಾಪುರ, ಎಂ. ನವೀನ್ ಮತ್ತು ಸಂಯುಕ್ತ ಕರ್ನಾಟಕ ವರಿಗಾರ ಮಹೇಶ್ ಹೆಗ್ಡೆ ಅವರಿಗೆ ನೀಡಲಾಗಿದೆ. ಹಾಗೆಯೇ ಅತ್ಯುತ್ತಮ ತಾಲೂಕು ಘಟಕದ ಪ್ರಶಸ್ತಿಯನ್ನು ಸೊರಬ ತಾಲೂಕು ಘಟಕಕ್ಕೆ ನೀಡಲಾಗಿದೆ. ಸಂಘದ ಅಧ್ಯಕ್ಷ ನಾಗರಾಜ್ ಜೈನ್(ಬಣ್ಣದ ಬಾಬು) ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಕೆ.ಎಸ್. ಹುಚ್ರಾಯಪ್ಪ, ಆರ್.ಎಸ್. ಹಾಲಸ್ವಾಮಿ, ವೈದ್ಯನಾಥ್, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ಕಾರ್ಯದರ್ಶಿಗಳಾದ ದೀಪಕ್ ಸಾಗರ್, ಕೆ.ಆರ್. ಸೋಮನಾಥ್, ಗಾ.ರಾ. ಶ್ರೀನಿವಾಸ್, ರಾಜ್ಯಸಮಿತಿ ಸದಸ್ಯ ಎನ್. ರವಿಕುಮಾರ್ ಉಪಸ್ಥಿತರಿದ್ದರು.











Discussion about this post