ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಕಾರ್ಯನಿರತ ಪತ್ರರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಫೆ.20ರಂದು ಸಂಜೆ 5:30ಕ್ಕೆ ಕಮಲಾನೆಹರು ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಡಾ. ಎಂ ಗೋಪಾಲಕೃಷ್ಣ ಅಡಿಗರ ಜನ್ಮದಿನದ ಅಂಗವಾಗಿ `ಅಡಿಗರ ಕಾವ್ಯ ಚಿಂತನ-ಮಂಥನ-ಗಾಯನ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಹಾಲಸ್ವಾಮಿ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಎಂ. ಗೋಪಾಲಕೃಷ್ಣ ಅಡಿಗರು ನವ್ಯ ಕಾವ್ಯ ಲೋಕದಲ್ಲಿ ಪ್ರವೇಶ ಪಡೆದವರು. ಅವರ ಕಾವ್ಯಗಳು ಚಿಂತನೆಗೆ ದಾರಿ ಮಾಡಿಕೊಡುತ್ತವೆ. ನವ್ಯ ಕಾವ್ಯದ ನಾಯಕತ್ವ ವಹಿಸಿದವರು, ಕನ್ನಡ ಕಾವ್ಯವನ್ನು ಶ್ರೀಮಂತಗೊಳಿಸಿದವರು, ಅವರ ಕವಿತೆಗಳಲ್ಲಿ ಸೃಜನಶೀಲತೆ ಕಾಣಬಹುದು. ಕೇಂದ್ರ ಸಾಹಿತ್ಯ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. ಒಬ್ಬ ಶ್ರೇಷ್ಠ ಭಾರತೀಯ ಕವಿ. ಇಂತಹ ಕವಿಯ ಕುರಿತ ಕಾರ್ಯಕ್ರಮ ವಿಶೇಷವಾಗಿದೆ. ಈ ಕಾರ್ಯಕ್ರಮಕ್ಕೆ ಶಿವಮೊಗ್ಗದ ಬಹುಮಖಿ ಸಹಯೋಗ ನೀಡುತ್ತಿದೆ ಎಂದರು.
ಅಡಿಗರ ಕುರಿತು ಪ್ರೊ. ರಾಜೇಂದ್ರ ಚೆನ್ನಿ ಮಾತನಾಡುವರು. ಆನಂದಪುರಂನ ಎಡೆಹಳ್ಳಿಯ ಎಂ.ಎಸ್. ಭದ್ರಪ್ಪ ಗೌಡ ಮತ್ತು ಸಹನಾ ಜಿ. ಭಟ್ ಅಡಿಗರ ಕಾವ್ಯ ಗಾಯನದ ಜೊತೆಗೆ ಕವಿತೆಯ ಅರ್ಥ ಕೂಡ ಹೇಳುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ವಿ. ಶಿವಕುಮಾರ್ ವಹಿಸಲಿದ್ದು, ರಾಜ್ಯ ನಿರ್ದೇಶಕ ಎನ್. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್.ಎಸ್. ನಾಗಭೂಷಣ್ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ ಅರುಣ್, ಕಾರ್ಯದರ್ಶಿ ಕೆ.ಆರ್. ಸೋಮನಾಥ್ ಇದ್ದರು.
Also read: ಶಿರಸಿಯ ಈ ಶಾಲೆಯಲ್ಲಿದೆ ರೋಬೋಟಿಕ್ ಗೊಂಬೆ ಟೀಚರ್! ಇದು ಹೇಗೆ ಕಾರ್ಯನಿರ್ವಹಿಸುತ್ತೆ ನೋಡಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post