ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀವಿಜಯ ಕಲಾನಿಕೇತನ ವತಿಯಿಂದ ಜ.29ರ ಭಾನುವಾರ ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ, ಡಾ. ಕೆ.ಎಸ್. ಪವಿತ್ರ ಅವರ ನಿರ್ದೇಶನದಲ್ಲಿ ಡಾ. ಪುತಿನ ಅವರ ‘ಗೋಕುಲ ನಿರ್ಗಮನ’ ನೃತ್ಯ ರೂಪಕವನ್ನು ಏರ್ಪಡಿಸಲಾಗಿದೆ.
ಡಾ. ಕೆ.ಎಸ್. ಚೈತ್ರ, ಡಾ. ಕೆ.ಎಸ್. ಪವಿತ್ರ, ಡಾ. ಕೆ.ಎಸ್. ಶುಭ್ರತಾ ಮತ್ತು ಶ್ರೀವಿಜಯದ ತಂಡದವರಿಂದ ಈ ನೃತ್ಯ ರೂಪಕ ಮೂಡಿಬರಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾನ್ಯ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮತ್ತು ಕನ್ನಡ ಪ್ರಾಧ್ಯಾಪಕರಾದ ಡಾ. ಚನ್ನೇಶ್ ಹೊನ್ನಾಳಿ ಅವರು ಆಗಮಿಸಲಿದ್ದಾರೆ.
ಶ್ರೀವಿಜಯದ ಅಧ್ಯಕ್ಷ ಡಾ. ಕೆ.ಆರ್. ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನೃತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀವಿಜಯದ ನಿರ್ದೇಶಕಿ ಡಾ. ಕೆ.ಎಸ್. ಪವಿತ್ರ ಕೋರಿದ್ದಾರೆ.
Also read: ತ್ರಿವಿಧ ದಾಸೋಹಿ ಶ್ರೀಬಸವಣ್ಣಜ್ಜ ಚಿತ್ರ ಭಕ್ತರ ಮನ ತಲುಪಲಿದೆ: ಅಭಿನವ ಶ್ರೀಬಸವಣ್ಣನವರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post