ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತೀಯ ವೈದ್ಯಕೀಯ ಸಂಘದ #Indian Medical Association ಜಿಲ್ಲಾ ಶಾಖೆಯ ಅಮೃತ ಮಹೋತ್ಸವ ವರ್ಷಾಚರಣೆಯ ಸಮಾರಂಭವನ್ನು ಜ. 18ರಂದು ಐಎಂಎ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಶ್ರೀಧರ್ ಎಸ್. ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತೀಯ ವೈದ್ಯಕೀಯ ಸಂಘವು ವೈದ್ಯರನ್ನು ಪ್ರತಿನಿಧಿಸುವ ಏಕೈಕ ಸಂಸ್ಥೆಯಾಗಿದೆ. ಸಂಘದಲ್ಲಿ 3.5 ಲಕ್ಷ ಸದಸ್ಯರಿದ್ದಾರೆ. 1949ರಲ್ಲಿ ಶಿವಮೊಗ್ಗದಲ್ಲಿ ಐಎಂಎ ಪ್ರಾರಂಭವಾಯಿತು. ಆಗ 15 ಜನ ಸದಸ್ಯರಿದ್ದರು. ಈಗ 600ಕ್ಕೂ ಹೆಚ್ಚು ಸದಸ್ಯರಿದ್ದಾರೆ. 75 ವರ್ಷ ತುಂಬಿದ ಈ ಶುಭ ಸಂದರ್ಭದಲ್ಲಿ ಅಮೃತ ಮಹೋತ್ಸವದ ವರ್ಷಾಚರಣೆ ಹಮ್ಮಿಕೊಳ್ಳಲಾಗಿದೆ ಎಂದರು.
75 ವರ್ಷದ ನೆನಪಿನಲ್ಲಿ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಫೆ. 1 ಮತ್ತು 2ರಂದು ಮಲೆನಾಡು ನೇತ್ರ ತಜ್ಞರ ಸಹಯೋಗದೊಂದಿಗೆ ನಗರದ ಆಟೋರಿಕ್ಷಾ, ಟ್ಯಾಕ್ಸಿ ಮತ್ತು ಲಾರಿ ಚಾಲಕರಿಗೆ ಉಚಿತವಾಗಿ ಕಣ್ಣಿನ ತಪಾಸಣಾ ಶಿಬಿರವನ್ನು ಐಎಂಎ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದರು.
Also read: ಜ.18 | ಮಲೆನಾಡು ಸ್ಟಾರ್ಟಪ್ ಸಮ್ಮೇಳನ | ಯುವ ಉದ್ಯಮಿಗಳಿಗೆ ಸುವರ್ಣಾಕಾಶ
ಹಾಗೆಯೇ ಮುಂದಿನ ದಿನಗಳಲ್ಲಿ ಸಾಮೂಹಿಕ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರಗಳನ್ನು ಕೂಡ ಹಮ್ಮಿಕೊಳ್ಳಲಾಗುವುದು. ಆರೋಗ್ಯದ ಕುರಿತ ಉಪನ್ಯಾಸ, ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳಿಗೆ ಸಿಪಿಆರ್ ತರಬೇತಿ, ವಿವಿಧ ಶಾಲೆಗಳ ವಿದ್ಯಾರ್ಥಿಳಿಗೆ ಆರೋಗ್ಯ ತಪಾಸಣೆ, ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ತಪಾಸಣೆ ನಡೆಸಲಾಗುವುದು ಎಂದರು.
ಹಿರಿಯ ಸದಸ್ಯ ಡಾ.ಪಿ. ನಾರಾಯಣ್ ಮಾತನಾಡಿ, ಐಎಂಎ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದು, ಮಹಿಳಾ ವೈದ್ಯರಿಗೂ ಕೂಡ ವಿಶೇಷ ಕಾರ್ಯಾಗಾರ, ಸುರಕ್ಷತೆ ವಿಷಯಗಳ ಬಗ್ಗೆ ಚರ್ಚೆ ಜೊತೆಗೆ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಸೆಪ್ಟೆಂಬರ್ ನಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದರು.
ಡಾ.ಕೆ.ಆರ್. ಶ್ರೀಧರ್ ಮಾತನಾಡಿ, ಜ. 18ರಂದು ಸಂಜೆ 7 ಗಂಟೆಗೆ ನಡೆಯಲಿರುವ ಸಮಾರಂಭ ಉದ್ಘಾಟನೆಯನ್ನು ವೈದ್ಯ ಸಾಹಿತಿ ಹಾಗೂ ಥಟ್ ಅಂತ ಹೇಳಿ ಖ್ಯಾತಿಯ ಡಾ.ನಾ. ಸೋಮೇಶ್ವರ್ ನೆರವೇರಿಸುವರು. ಈ ಎಲ್ಲಾ ಕಾರ್ಯಕ್ರಮಗಳಿಗೆ ಐಎಂಎ ಸದಸ್ಯರು ಹಾಜರಿರುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಡಾ. ವಿನಯಾಪ್ರಸಾದ್, ಡಾ. ನಾಗರಾಜ್, ವಿಶಾಲಾಕ್ಷಿ, ರಾಜಾರಾಮ್, ರವೀಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















