ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಜಿ ಆಸ್ಪತ್ರೆಯ ಡಾ. ಧನಂಜಯ ಸರ್ಜಿ ಅವರು ರಾಜಕೀಯಕ್ಕೆ ಬರುತ್ತಾರಂತೆ, ಆ ಪಕ್ಷದಿಂದ ನಿಲ್ಲುತ್ತಾರಂತೆ, ಈ ಪಕ್ಷದಿಂದ ನಿಲ್ಲುತ್ತಾರಂತೆ… ಕಳೆದ ಕೆಲವು ದಿನಗಳಿಂದ ನಗರದಲ್ಲಿ ಇದೇ ಮಾತುಗಳು… ಆದರೆ, ಇವೆಲ್ಲ ಊಹಾಪೋಹಗಳಿಗೆ ಸ್ವತಃ ತೆರೆ ಎಳೆದಿರುವ ಡಾ. ಧನಂಜಯ ಸರ್ಜಿ Dr. Dananjaya Sarji ಅವರು ರಾಜಕೀಯ ಪ್ರವೇಶವನ್ನು ಅಧಿಕೃತಗೊಳಿಸಿದ್ದಾರೆ.
ಡಾ. ಧನಂಜಯ ಸರ್ಜಿ ಅವರು ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ಸರ್ಜಿ ಕನ್ವೆನ್ಷನ್ ಹಾಲ್’ನಲ್ಲಿ ಅಭಿಮಾನಿಗಳು ಹಾಗೂ ಸರ್ಜಿ ಆಸ್ಪತ್ರೆಗಳ ಸಮೋಹ ಮತ್ತು ಸರ್ಜಿ ಕುಟುಂಬ ಆಯೋಜಿಸಿದ್ದ ಜನುಮದಿನದ ಸಂಭ್ರಮ ಸಮಾರಂಭದಲ್ಲಿ ಮುಕ್ತವಾಗಿ ಹಾಗೂ ಸಂತಸದಿಂದ ಹೇಳಿದ ಮಾತುಗಳಿವು.

Also read: ಸೆ.15ರಂದು ಸಂಸ್ಕೃತಿ ಚಿಂತಕ ಗುರುರಾಜ ಪೋಶೆಟ್ಟಿಹಳ್ಳಿ ಸೇರಿ ಹಲವರಿಗೆ ‘ಬಸವನಗುಡಿ ವಿಪ್ರರತ್ನ’ ಪ್ರಶಸ್ತಿ ಪ್ರದಾನ
ನಾಲ್ಕು ಡಿ ಯಂತೆ ಕನಸು ದೊಡ್ಡದಾಗಿರಬೇಕು. ಚುನಾವಣಾ ಅಖಾಡಕ್ಕೆ ದುಮುಕಿ ಜನಪರ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಕೊಳ್ಳಲು ಇಚ್ಚಿಸುತ್ತೇನೆ. ನಮ್ಮ ತಯಾರಿಗಳು ದೊಡ್ಡದಾಗಿರಬೇಕು. ತಂದೆಯ ಹೆಸರಿನ ಜೊತೆ ಗುರುತಿಸಿಕೊಂಡ ನನಗೆ, ಸಾಮಾಜಿಕ ಕಳಕಳಿಯ ಇಂತಹ ದೊಡ್ಡ ಕನಸು ಮೊಳೆಯಲು ಕಾರಣ ಎಂದು ಡಾ. ಸರ್ಜಿ ಹೇಳಿದರು.












Discussion about this post