ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥವನ್ನು ಬದಲಿಸುವ ಕಾಲವನ್ನು ನಮ್ಮ ಸನಾತನ ಧರ್ಮದಲ್ಲಿ ಒಂದು ಹಬ್ಬವಾಗಿ ಆಚರಿಸುವುದೇ ಸಂಕ್ರಾತಿಯಾಗಿದೆ ಎಂದು ಪಿಇಎಸ್ ಪಬ್ಲಿಕ್ ಶಾಲೆಯ #PES Public School ಪ್ರಾಂಶುಪಾಲ ಸೋಮಶೇಖರಯ್ಯ ಹೇಳಿದರು.
ಸಂಕ್ರಾಂತಿ ಹಬ್ಬದ #Sankranthi Festival ಅಂಗವಾಗಿ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥವನ್ನು ಬದಲಿಸುವ ಕಾಲವನ್ನು ನಮ್ಮ ಸನಾತನ ಧರ್ಮದಲ್ಲಿ ಒಂದು ಹಬ್ಬವಾಗಿ ಆಚರಿಸುವುದೇ ಸಂಕ್ರಾತಿ. ಈ ಹಬ್ಬವನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುತ್ತದೆ. ಸೂರ್ಯದೇವನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾAತಿಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತರು ಪೈರು ತೆಗೆಯುವ ಸಂದರ್ಭವನ್ನು ಬೆಳೆಗಳ ಸಮೃದ್ಧಿಯ ಸಂಕೇತವಾಗಿ ಆಚರಿಸಲಾಗುತ್ತದೆ. ಪ್ರತಿಯೊಂದು ತುತ್ತು ತಿನ್ನುವ ಮುನ್ನ ರೈತರನ್ನು ಸ್ಮರಿಸುವುದು ನಮ್ಮ ಸಂಸ್ಕೃತಿ ಎಂಬುದನ್ನು ಮಕ್ಕಳು ತಮ್ಮ ನೃತ್ಯ, ಕಿರು ಪ್ರಹಸನದ ಮೂಲಕ ಮನರಂಜಿಸಿದರು.
ಪ್ರತಿಯೊಂದು ಹಬ್ಬವೂ ತನ್ನದೇ ಆದ ವೈಶಿಷ್ಟತೆ ಹೊಂದಿದೆ. ನಾವು ಮುಂದಿನ ಪೀಳಿಗೆಗೂ ಅದನ್ನು ಉಡುಗೊರೆಯಾಗಿ ನೀಡುವುದು ನಮ್ಮ ಪರಂಪರೆ ಎಂದು ಪ್ರಾಂಶುಪಾಲರು ಸೋಮಶೇಖರಯ್ಯರವರು ಮಕ್ಕಳಿಗೆ ಮನದಟ್ಟು ಮಾಡಿಸಿದರು.
Also read: ಸೊರಬ | ಭೀಕರ ಅಪಘಾತ | ಮೂವರ ದುರ್ಮರಣ | ನಾಲ್ವರಿಗೆ ಗಂಭೀರ ಗಾಯ
ಸಂಯೋಜಕ, ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಮಂಜಪ್ಪ ಮಾತನಾಡಿ, ರಾಷ್ಟ್ರೀಯ ಯುವ ದಿನವನ್ನು ಸ್ಮರಿಸುತ್ತಾ ಮಕ್ಕಳಿಕೆ ಏಕಾಗ್ರತೆ ಹಾಗೂ ಸ್ವಾಮಿ ವಿವೇಕಾನಂದರ ಸಿದ್ಧಾಂತಗಳು ಮತ್ತು ಅವರ ಆದರ್ಶಗಳು ವಿದ್ಯಾರ್ಥಿಗಳಿಗೆ ಪ್ರೇರಣೆದಾಯಕ ಎಂದು ತಿಳಿಸಿದರು.
8ನೇ ತರಗತಿಯ ಕುಮಾರಿ ಚಿಂತನ ಮಾತನಾಡಿ, ಈ ಹಬ್ಬದಲ್ಲಿ ಎಳ್ಳು ಮತ್ತು ಬೆಲ್ಲವನ್ನು ನಮ್ಮ ಪೂರ್ವವಿಕರು ಹಬ್ಬದ ಒಂದು ಭಾಗವಾಗಿ ಸಿಹಿಯಾಗಿ ಉಪಯೋಗಿಸಲು ವೈಜ್ಞಾನಿಕ ಕಾರಣವನ್ನು ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈ ಹಬ್ಬವನ್ನು ಸೂರ್ಯದೇವನು ಉತ್ತರಾಯಣ ಪಥಕ್ಕೆ ಬರುವ ಸಂದರ್ಭವನ್ನು ಗಾಳಿಪಟವನ್ನು ಹಾರಿಸವುದರ ಮೂಲಕ ಸೂರ್ಯದೇವರನ್ನು ಬರಮಾಡಿಕೊಳ್ಳುತ್ತಾರೆ ಎಂದು ತಿಳಿಸಿಕೊಟ್ಟರು.
ಮಕ್ಕಳು ತಮ್ಮ ನೃತ್ಯ, ಕಿರು ಪ್ರಹಸನ, ಸುಗ್ಗಿ ಸಂಭ್ರಮದ ಗಾಯನ ಹಾಗೂ ರಸಪ್ರಶ್ನೆಗಳ ಮೂಲಕ ಮನೋರಂಜನೆ ಜೊತೆಗೆ ಮಕ್ಕಳಿಗೆ ನಮ್ಮ ಸಂಸ್ಕೃತಿ ನಮ್ಮ ಪರಂಪರೆ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು.
ಮಾನ್ಯತ ಪಿ. ಚಂದನಾನಿ ಸ್ವಾಗತಿಸಿ, ನಿಸರ್ಗ ಹಾಗೂ ಪ್ರತೀಕ್ಷಾ ನಿರೂಪಿಸಿದರು. ದೀಪ ವಂದನಾರ್ಪಣೆ ಮಾಡಿದರು. ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಬೋಧಕವರ್ಗ, ಬೋಧೇಕತರ ವರ್ಗ ಎಲ್ಲರೂ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post